ನವದೆಹಲಿ: ಮುಂದಿನ ಕೆಲವೇ ವರ್ಷದಲ್ಲಿ ದೇಶದಲ್ಲಿ 56 ಹೊಸ ವಿಮಾನನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಗ್ಲೋಬಲ್ ಲಾಜಿಸ್ಟಿಕ್ಸ್ ಸಮಿತ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದಂತಹ ದೇಶಗಳಿಗೆ ವ್ಯಾಪಾರವನ್ನು ವೃದ್ಧಿಸಲು, ದೇಶಿ ಮತ್ತು ವಿಶ್ವ ಆರ್ಥಿಕತೆಯೊಂದಿಗೆ ವೇಗವಾಗಿ ಏಕೀಕೃತಗೊಳ್ಳಲು ಲಾಜಿಸ್ಟಿಕ್ಸ್ಗಳು ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.
ಇದೇ ಉದ್ದೇಶದೊಂದಿಗೆ 56 ಹೊಸ ವಿಮಾನನಿಲ್ದಾಣಗಳು ಮುಂಬರುವ ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.
ಎಲ್ಲಾ ಷೇರುದಾರರನ್ನು ಒಂದೆಡೆ ಸೇರಿಸುವುದರಿಂದ ಲಾಜಿಸ್ಟಿಕ್ ಸುಧಾರಣೆಗೆ ವೇದಿಕೆ ಸಿಕ್ಕಂತಾಗುತ್ತದೆ ಮತ್ತು ಅಂತಾರಾಷ್ಟ್ರೀಯ ಹಾಗೂ ಅಂತರ್ ರಾಜ್ಯ ವ್ಯಾಪಾರ ಹರಿಯುವಿಕೆಗಳಿಗೆ ಸಂಪರ್ಕ ಸಿಕ್ಕಂತಾಗುತ್ತದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.