ನವದೆಹಲಿ: ಸರ್ಕಾರ ಶೀಘ್ರದಲ್ಲೇ ಇಂಟರ್ನೆಟ್ ಬ್ರಾಡ್ಬ್ಯಾಂಡ್ ಸರ್ವಿಸ್ನ ಕನಿಷ್ಠ ವೇಗ ಅವಶ್ಯಕತೆಯನ್ನು ಏರಿಸಲಿದೆ. ಬ್ರಾಡ್ಬ್ಯಾಂಡ್ನ ಸ್ಪೀಡ್ ಪ್ರಸ್ತುತ ಇರುವ 512 Kbpsಗಿಂತ 2 Mbpsಗೆ ಏರಿಸಲು ನಿರ್ಧರಿಸಲಾಗಿದೆ.
ದೂರಸಂಪರ್ಕ ಇಲಾಖೆ ಈ ಮಾಹಿತಿಯನ್ನು ನೀಡಿದ್ದು, ಇದಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಎಪ್ರಿಲ್ ಅಂತ್ಯದೊಳಗೆ ಘೋಷಣೆ ಹೊರ ಬರುವ ನಿರೀಕ್ಷೆ ಇದೆ.
ಜಾಗತಿಕ ಅಂತರ್ಜಾಲ ಪರಿಶೀಲನಾ ಸಂಸ್ಥೆ ಊಕ್ಲಾ ಇತ್ತೀಚಿಗೆ ಬಿಡುಗಡೆ ಮಾಡಿದ ಸ್ಪೀಡ್ಟೆಸ್ಟ್ ಗ್ಲೋಬಲ್ ಇಂಡೆಕ್ಸ್ನಲ್ಲಿ ಭಾರತ ಬ್ರಾಡ್ಬ್ಯಾಂಡ್ ಸ್ಪೀಡ್ನಲ್ಲಿ 67ನೇ ಸ್ಥಾನ ಮತ್ತು ಮೊಬೈಲ್ ಇಂಟರ್ನೆಟ್ ಸ್ಪೀಡ್ನಲ್ಲಿ 109ನೇ ಸ್ಥಾನವನ್ನು ಪಡೆದಿತ್ತು.
ಬಹುತೇಕ ಟೆಲಿಕಾಂ ಆಪರೇಟರ್ಗಳು 4ಜಿ ಸೇವೆಯನ್ನು ಒದಗಿಸಿದರೂ ನಗರ ಪ್ರದೇಶಗಳ ಜನರಿಗೆ ಮಾತ್ರ ಇದು ಸಿಗುತ್ತಿದೆ. ಗ್ರಾಮೀಣ ಭಾಗಕ್ಕೆ ಇನ್ನೂ ಇದು ತಲುಪಿಲ್ಲ. ಹೀಗಾಗಿ ಕನಿಷ್ಠ ಇಂಟರ್ನೆಟ್ ಸ್ಪೀಡ್ ಮಿತಿಯನ್ನು ಎರಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.