ನವದೆಹಲಿ: ಗೌರವ ಲೆಫ್ಟಿನೆಂಟ್ ಕೊಲೊನಿಯಲ್ ಆಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್ ದೋನಿಯವರು ಸೇನಾ ಸಮವಸ್ತ್ರದಲ್ಲೇ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕಾರ ಮಾಡಿದ್ದರು.
ಈ ಬಗ್ಗೆ ತಮ್ಮ ಸಂತೋಷ ಹಂಚಿಕೊಂಡಿರುವ ಧೋನಿ, ‘ಸೇನಾ ಸಮವಸ್ತ್ರದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿರುವುದರಿಂದ ನನ್ನ ಉತ್ಸಾಹ 10 ಪಟ್ಟು ಹೆಚ್ಚಾಗಿದೆ’ ಎಂದಿದ್ದಾರೆ. ಅಲ್ಲದೇ ದೇಶಕ್ಕೆ ಅಪ್ರತಿಮ ಕೊಡುಗೆಗಳನ್ನು ನೀಡುತ್ತಿರುವ ಸೇನೆಗೆ ಈ ವೇಳೆ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸೇನಾ ಸಮವಸ್ತ್ರ ತೊಟ್ಟು ಅವರು ಹಾಕಿರುವ ಪೋಸ್ಟ್ಗೆ 450,000 ಲೈಕ್ಸ್, 11,000 ಕಾಮೆಂಟ್ಗಳು ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.