ಸಂಸ್ಕೃತ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಭಾರತದ ಸಂಸ್ಕೃತಿಯ ಭಾಗ ಎನಿಸಿರುವ ಸಂಸ್ಕೃತ ಆಡು ಭಾಷೆಯಾಗಿ ಉಳಿದಿಲ್ಲ. ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಇದು ಸೀಮಿತಗೊಂಡಿದೆ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಕೆಲವು ಕುಟುಂಬಗಳು ಸಂಸ್ಕೃತ ಮಾತನಾಡುತ್ತಿವೆ. ಅದರಲ್ಲಿ ಪಶ್ಚಿಮಬಂಗಾಳದ ಮೊಮೈತ ಬರ್ ಮತ್ತು ಪ್ರಣಬ್ ಬರ್ ದಂಪತಿಯ ಕುಟುಂಬ.
ಇವರ ಆಡುಭಾಷೆ ಬಂಗಾಳಿ ಆದರೆ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದ ಮೊಮೈತ ಮತ್ತು ಪ್ರಣಬ್ ಪ್ರೀತಿಸಿ ಮದುವೆಯಾಗಿದ್ದರೆ. ಇವರು ಮೊದಲ ಭೇಟಿಯಲ್ಲಿ ಸಂಸ್ಕೃತವನ್ನು ಮಾತನಾಡಿದ್ದು ಮಾತ್ರವಲ್ಲ ಜೀವನದುದ್ದಕ್ಕೂ ಸಂಸ್ಕೃತದಲ್ಲೇ ಸಂಭಾಷಣೆ ನಡೆಸುತ್ತಾ ಬಂದಿದ್ದಾರೆ. ತಮ್ಮಿಬ್ಬರು ಮಕ್ಕಳೊಂದಿಗೂ ಅದನ್ನೇ ಮಾತನಾಡುತ್ತಿದ್ದಾರೆ.
ಇವರ ಮನೆಗೆ ಅತಿಥಿಗಳು ಬಂದಾಗ ಮಾತ್ರ ಬಂಗಾಳಿ ಮಾತನಾಡಲಾಗುತ್ತದೆ. ಉಳಿದಂತೆ ಪ್ರಾಚೀನ ಸಂಸ್ಕೃತವೇ ಇವರ ಮನೆ ಭಾಷೆ. ಮಕ್ಕಳಿಗೆ ಬಂಗಾಳಿ ಸಾಹಿತ್ಯವನ್ನು ದಂಪತಿ ಹೇಳಿಕೊಡುತ್ತಾರೆ. ಪಶ್ಚಿಮಬಂಗಾಳದ ಏಕೈಕ ಸಂಸ್ಕೃತ ಕುಟುಂಬವೆಂಬ ಹೆಗ್ಗಳಿಕೆಗೆ ಬರ್ ಕುಟುಂಬ ಪಾತ್ರವಾಗಿದೆ.
ಕರ್ನಾಟಕದ ಮತ್ತೂರು, ಹೋಶಹಳ್ಳಿ, ಮಧ್ಯಪ್ರದೇಶದ ಮೊಹದ್, ಬಘುವರ್, ರಾಜಸ್ಥಾನದ ಗನೊಡದಲ್ಲಿ ಈಗಲೂ ಸಂಸ್ಕೃತವನ್ನು ಮಾತನಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.