ಮಹಾರಾಷ್ಟ್ರ ಮತ್ತು ಗುಜರಾತ್ನ ಗಡಿಯಲ್ಲಿರುವ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಗೆ ಸೇರಿದ ಗ್ರಾಮ ಖಂದರ್ಬಾರ್. ಭತ್ತ ಬೆಳೆಯುವುದೇ ಈ ಗ್ರಾಮದ ಜನರ ಮೂಲ ಕಸುಬು. ಆದರೆ ತಮ್ಮ ಗ್ರಾಮದಲ್ಲಿ ರೈಸ್ ಮಿಲ್ ಇಲ್ಲದೇ ಇರುವ ಕಾರಣ ಅನೇಕ ವರ್ಷಗಳಿಂದ ಇಲ್ಲಿನ ರೈತರು ತಾವು ಬೆಳೆದ ಭತ್ತಗಳನ್ನು ವ್ಯಾಪಾರಿಗಳಿಗೆ, ಮಿಲ್ಲರ್ಗಳಿಗೆ ಮಾರಾಟ ಮಾಡುತ್ತಿದ್ದರು. ಆದರೀಗ ಅಲ್ಲಿನ ಚಿತ್ರಣ ಬದಲಾಗಿದೆ, ರೈತರೇ ಅಕ್ಕಿಗಳನ್ನು ತಯಾರಿಸುತ್ತಿದ್ದಾರೆ.
೨೦೧೦ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ಮಹದಾಸೆಯನ್ನು ಹೊತ್ತ ಎನ್ಜಿಓ ಡಾ.ಹೆಗ್ಡೆವಾರ್ ಸೇವಾ ಸಮಿತಿ ತನ್ನ ಕೃಷಿ ಅಂಗಸಂಸ್ಥೆ ಕೃಷಿ ವಿಗ್ಯಾನ್ ಕೇಂದ್ರದ ಮೂಲಕ ಖಂದರ್ಬಾರ್ ರೈತರ ಸಮಸ್ಯೆಯ ಬಗ್ಗೆ ಅಧ್ಯಯನವನ್ನು ನಡೆಸಿತು.
ಬಳಿಕ ಕೃಷಿ ಪರಿಕರ ಉತ್ಪಾದಕ ಸಂಸ್ಥೆ ಪಡ್ಗಿಲ್ವಾರ್ಗೆ ಸಣ್ಣ ಪ್ರಮಾಣದ ರೈಸ್ ಮಿಲ್ ತಯಾರಿಸುವಂತೆ ಮನವಿ ಮಾಡಿತು. ಇದಕ್ಕಾಗಿ ರೂ.೧ಲಕ್ಷವನ್ನು ನೀಡಿ ಪ್ರೋತ್ಸಾಹಿಸಿತು. ಇದರ ಫಲವಾಗಿ ಸಂಸ್ಥೆ ಗ್ರಾಮದಿಂದ ಗ್ರಾಮಕ್ಕೆ ಸಂಚರಿಸಬಹುದಾದ ಕಡಿಮೆ ವಿದ್ಯುತ್ನಲ್ಲಿ ಕಾರ್ಯನಿರ್ವಹಿಸಬಹುದಾದ ಸಂಚಾರಿ ರೈಸ್ ಮಿಲ್ ಕಂಡು ಹಿಡಿಯುವಲ್ಲಿ ಯಶಸ್ವಿಯಾಯಿತು.
ಇದೀಗ ಈ ರೈಸ್ಮಿಲ್ನ್ನು ಕೃಷಿ ವಿಗ್ಯಾನ್ ಕೇಂದ್ರ ಮತ್ತು ಪಡ್ಗಿಲ್ವಾರ್ ಸಂಸ್ಥೆ ಜಂಟಿಯಾಗಿ ಗ್ರಾಮಸ್ಥರಿಗೆ ಬಾಡಿಗೆಗೆ ನೀಡುತ್ತದೆ. ವರ್ಷಕ್ಕೆ ರೂ.500 ಬಾಡಿಗೆ. ಆನರಿಗೆ ಇತರ ನಿರ್ವಹಣೆಯ ತರಬೇತಿಯನ್ನೂ ಅದು ನೀಡಿದೆ. ಭತ್ತದ ಧೂಳನ್ನು ಕೂಡ ಇದು ಸ್ವಚ್ಛ ಮಾಡುತ್ತದೆ. ಈ ರೈಸ್ ಮಿಲ್ನಿಂದಾಗಿ ಖಂದುರ್ಬಾರ್ ಗ್ರಾಮದ ಜನರ ಜೀವನವೇ ಬದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.