ಉಡುಪಿ : ಸಾಸ್ತಾನ ಮಿತ್ರರು, ಸಂಕಲ್ಪಿಸಿರುವ, ಗೀತಾನಂದ ಪೌಂಡೇಶನ್ ಕೋಟ, ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಹಕಾರದೊಂದಿಗೆ, ಉಡುಪಿ ಜಿಲ್ಲಾಧಿಕಾರಿ ಅವರಿಂದ ಚಾಲನೆಗೊಂಡಿರುವ “ಹಸಿರು ಅಭಿಯಾನ” ಬೈಸಿಕಲ್ ರಥಯಾತ್ರೆಯು ಜ.7, ರ ಭಾನುವಾರ ದಿನದಂದು, ಉಡುಪಿ ಮೂಲಕ ಪ್ರಾರಂಭಗೊಂಡು, ಆದಿ ಉಡುಪಿ, ಕಲ್ಮಾಡಿ, ಮಲ್ಪೆ, ಬೀಚ್, ವಡಭಾಂಡೇಶ್ವರ, ಕೊಡವೊರು, ಲಕ್ಷೀನಗರ, ಸಂತೆಕಟ್ಟೆ ಅಂಬಾಗಿಲು ಕಲ್ಸಂಕ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸಿತು.
ಪರಿಸರ ಸಂರಕ್ಷಣೆ, ಸ್ವಚ್ಚತೆ, ನೀರಿನ ಮಿತವ್ಯಯ, ವಿಚಾರಗಳ ಬಗ್ಗೆ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ. ಸಂದೇಶ ಕರ ಪತ್ರಗಳನ್ನು ವಿತರಿಸಿದ್ದಾರೆ. ರಥ ಸಾಗುವ ಹಾದಿಯಲ್ಲಿ ಕಣ್ಣಿಗೆ ಕಂಡ, ಅಪಘಾತದಿಂದ ಸಾವು ಕಂಡ ಪ್ರಾಣಿಗಳ ಕಳೇಬರಗಳನ್ನು ಆಯಾಕಟ್ಟಿನ ಸ್ಥಳ ಗುರುತಿಸಿ ಹೊಂಡ ತೊಡಿ ಪರಿಸರ ಕಾರ್ಯಕರ್ತರು ದಫನ ಮಾಡಿದ್ದಾರೆ. ಸಾರ್ವಜನಿಕರ ಬೇಡಿಕೆ ಮೆರೆಗೆ ಮನೆಗಳ ಆಯಾಕಟ್ಟಿನ ಸ್ಥಳಗಳಲ್ಲಿ ಗಿಡಗಳ ಮನೆ ಸದಸ್ಯರ ಉಪಸ್ಥಿತಿಯಲ್ಲಿ ನಾಟಿ ಮಾಡಿದ್ದಾರೆ. ಮತ್ತು ಕೆಲವು ಸ್ಥಳಗಳಲ್ಲಿ ಉಚಿತ ಗಿಡಗಳ ವಿತರಣೆ ನಡೆಸಲಾಯಿತು. ಅಂಬಾಗಿಲಿನಲ್ಲಿ ಉದ್ಯಮಿ ರಂಜನ್ ಕಲ್ಕೂರ ತಮ್ಮ ನಿವಾಸಕ್ಕೆ ಆಹ್ವಾನಿಸಿ ಹಸಿರು ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಅವರಿಗೆ ಶ್ರೀಗಂಧದ ಗಿಡವನ್ನು ನೀಡಲಾಯಿತು. ಅಭಿಯಾನ ಪ್ರಚಾರಕರಾಗಿ ಪರಿಸರವಾದಿ ವಿನಯಚಂದ್ರ ಸಾಸ್ತಾನ, ಶೇಷಗಿರಿ ನಾಯಕ್ ಸಾಲಿಗ್ರಾಮ, ಶಿರೂರು ತಾರಾನಾಥ್ ಮೇಸ್ತ ಪಾಲ್ಗೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.