ಭಾರತದ ಏಕೈಕ ಪೈಲೆಟ್ ಕುಟುಂಬ ಎನಿಸಿಕೊಂಡಿದೆ ದೆಹಲಿಯ ಕುಟುಂಬ. ಇಲ್ಲಿ ಪೋಷಕರೂ ಪೈಲೆಟ್ಗಳು ಅವರ ಮಕ್ಕಳೂ ಪೈಲೆಟ್ಗಳು. ಆಗಸದಲ್ಲಿ ವಿಮಾನ ಹಾರಿಸುವ ಕಾಯಕವನ್ನು ಈ ಕುಟುಂಬ ಕೈಗೊಂಡು ಬರೋಬ್ಬರಿ 100 ವರ್ಷಗಳೇ ಆಗಿವೆ.
ಕ್ಯಾಪ್ಟನ್ ಜೈ ದೇವ್ ಭಸಿನ್ 1945ರಲ್ಲಿ ಭಾರತದ 7 ಮಂದಿ ಕಮಾಂಡರ್ಗಳಲ್ಲಿ ಒಬ್ಬರಾಗಿ ವಿಮಾನ ಹಾರಿಸುತ್ತಿದ್ದರು. ಅವರ ಮಗ ರೋಹಿತ್ ಭಸಿನ್ ಕೂಡ ಅದೇ ವೃತ್ತಿಯನ್ನು ಮುಂದುವರೆಸಿದರು. ಸೊಸೆ ನಿವೇದಿತ ಜೈನ್ ಕೂಡ ಪತಿ ಮತ್ತು ಮಾವನ ಹಾದಿಯನ್ನು ಅನುಸರಿಸಿ ಪೈಲೆಟ್ ಆದರು. ಇದೀಗ ಇವರ ಮಕ್ಕಳು ಕೂಡ ಪೈಲೆಟ್ ಆಗಿದ್ದಾರೆ.
ರೋಹಿತ್, ನವೇದಿತಾ ಅವರ ಮಗಳು ನಿಹಾರಿಕಾ ಮತ್ತು ಮಗ ರೋಹನ್ ಭಸಿನ್ ಕಮಾಂಡರ್ಗಳೂ ಹೌದು.
ನಿವೇದಿತಾ ಅವರು ಬೋಯಿಂಗ್ 737ನ ಅತೀ ಕಿರಿಯ ಮಹಿಳಾ ಕಮಾಂಡರ್ ಆಗಿದ್ದರು. ಆಗ ಅವರ ವಯಸ್ಸು 26 ಆಗಿತ್ತು. 1984ರ ಜೂನ್ 24ರಂದು ಇವರಿಗೆ ಇಂಡಿಯನ್ ಏರ್ಲೈನ್ಸ್ನಿಂದ ಮೊದಲು ನೇಮಕಾತಿ ಪತ್ರ ಬಂತು.
ಇದೀಗ ಅವರ ಪುತ್ರ ಬೋಯಿಂಗ್ 777ನ ಕಮಾಂಡರ್ ಆಗಿದ್ದಾರೆ, ನಿಹಾರಿಕಾ ಅವರೂ ವಿಮಾನ ಹಾರಾಟ ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.