ನವದೆಹಲಿ: ಭಾರತ 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ ಖರೀದಿ ಮಾಡಲು ಸಜ್ಜಾಗಿದೆ. ರೂ.21,738 ಕೋಟಿಯ ಈ ಕಾರ್ಯಕ್ಕೆ ರಕ್ಷಣಾ ಸಚಿವಾಲಯ ಅನುಮೋದನೆಯನ್ನು ನೀಡಿದೆ.
ಔಟ್ಡೇಟ್ ಆಗಿರುವ ಫ್ರೆಂಚ್ ವಿನ್ಯಾಸಪಡಿಸಿದ ಚೆಟಕ್ ಹೆಲಿಕಾಫ್ಟರ್ ಬದಲಿಗೆ ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ಗಳನ್ನು ಖರೀದಿ ಮಾಡಲಾಗುತ್ತಿದೆ. ಈ ಯೋಜನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ ಗ್ರೀನ್ ಸ್ನಿಗಲ್ ನೀಡಿದೆ.
ಭಾರತದ 140 ವಾರ್ಶಿಪ್ಗಳು ಯುಟಿಲಿಟಿ ಹೆಲಿಕಾಫ್ಟರ್ ಇಲ್ಲದೆಯೇ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು 111 ನಾವೆಲ್ ಯುಟಿಲಿಟಿ ಹೆಲಿಕಾಫ್ಟರ್ಗಳನ್ನು ಖರೀದಿ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.