ಬೆಳ್ತಂಗಡಿ: ಬಂಜಾರು ಮಲೆಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೋಳ್ಳಬೇಕಾಗ ಬಹುದು ಎಂದು ದ.ಕ. ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಬಂಜಾರು ಮಲೆ ಮೂಲ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಬುಧವಾರ ಬಾಂಜಾರು ಮಲೆಗೆ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಎರಡನೇ ಬಾರಿ ಭೇಟಿ ನೀಡಿದರು. ಬಳಿಕ ಸಮುದಾಯ ಭವನದಲ್ಲಿ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಈ ಹಿಂದಿನ ಭೇಟಿಯ ಸಂದರ್ಭ ಕಾಲೋನಿಯ ಸಮಸ್ಯೆಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ಪಾಲನಾ ವರದಿಯನ್ನು ಪರಿಶೀಲನೆ ನಡೆಸಿದರು.
ಸಭೆಯ ಮೊದಲಿಗೆ ತಾಲೂಕು ಮಟ್ಟದ ಅಧಿಕಾರಿಗಳು ಕಳೆದ ತನ್ನ ಭೇಟಿಯ ಬಳಿಕ ಇಲ್ಲಿಗೆ ಆಗಮಿಸಿ ಜನರ ಸಮಸ್ಯೆಗಳನ್ನು ಆಲಿಸದಿರುವುದಕ್ಕೆ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕು ಮಟ್ಟದ ಇಲಾಖಾಧಿಕಾರಿಗಳಿಗೆ ವಾಹನಗಳಿದ್ದರೂ ಕೂಡಾ ಕನಿಷ್ಟ 2 ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡದಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಬೇಕು. ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ದಕ್ರಮ ಕೈಗೊಳ್ಳಬೇಕಾಗಬಹುದು.
ಮಲೆಕುಡಿಯ ಸಮುದಾಯಕ್ಕೆ ಸರಬರಾಜಾಗುವ ಪೌಷ್ಠಿಕ ಆಹಾರಗಳನ್ನು ಕಕ್ಕಿಂಜೆ ಅಂಗನವಾಡಿಯಿಂದ ನಾವು ಬಾಡಿಗೆ ವಾಹನದಲ್ಲಿ ತರಬೇಕಾಗುತ್ತದೆ. ಸರಬರಾಜಗುವ ಅಕ್ಕಿ ಕಳಪೆ ಮಟ್ಟದ್ದಾಗಿದ್ದು ಬೇಯಿಸಲು ಸುಮಾರು ೨ ಗಂಟೆ ಬೇಕಾಗುತ್ತದೆ.ಇದನ್ನು ಬದಲಿಸಬೇಕು ಎಂದು ಸ್ಥಳೀಯರಾದ ನಾಗೇಶ್ ಡಿಸಿಯವರ ಗಮನಕ್ಕೆ ತಂದರು.ಇದಕ್ಕುತ್ತರಿಸಿದ ಡಿಸಿಯವರು ಮುಂದಿನ ದಿನಗಳಲ್ಲಿ ಪಡಿತರ ಸಾಮಾಗ್ರಿಗಳನ್ನು ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಬಾಂಜಾರುವಿಗೆ ಸರಬರಾಜು ಮಾಡುವಂತೆ ಜಿಲ್ಲಾ ಆಹಾರ ಇಲಾಖೆಯ ನಿರ್ದೇಶಕ ಶರಣ ಬಸಪ್ಪ ಮತ್ತು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮೋಹನ್ಕುಮಾರ್ ಅವರಿಗೆ ಸೂಚಿಸಿದರು.
ಬಾಂಜಾರಿನವರಿಗೆ ಯಾವುದೇ ಮಾಸಾಶನ ಇಲ್ಲ : ಕಳೆದ ಭೇಟಿಯ ಸಂದರ್ಭ ಮಾಸಾಶನಕ್ಕೆ ಸಂಬಂಧಿಸಿದ ದೂರುಗಳು ಇಂದು ಮತ್ತೆ ಪುನಾರಾರ್ವತನೆಗೊಂಡಿತು. ಕೇವಲ ಇಬ್ಬರು ಅಂಗವಿಕಲ ಮಕ್ಕಳಿಗೆ ಮಾಸಾಶನ ನೀಡಲಾಗಿದ್ದು ಬೇರೆಯಾರಿಗೂ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿಯವರು ಜೂ.9 ರಂದು ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು, ಪಿಡಿಓ ಸಮುದಾಯ ಸಭಾ ಭವನದಲ್ಲಿ ಅರ್ಹರಿಂದ ಅರ್ಜಿಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಾದುರಸ್ತಿಯಲ್ಲಿರುವ ಮನೆಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಕಳೆದ ವರ್ಷಅರ್ಜಿ ನೀಡಿದ್ದೇವೆ. ಆದರೆ ಅನುದಾನ ಸಿಕ್ಕಿಲ್ಲ ಎಂದಾಗ ಈ ವರ್ಷಅರ್ಜಿ ನೀಡದೆ ಹೇಗೆ ಅನುದಾನ ನೀಡಲಿ ಎಂದು ಸಮಾಜಕಲ್ಯಾಣಅಧಿಕಾರಿ ಹೇಳಿದರು. ಕಳೆದ ವರ್ಷದಅರ್ಜಿಯನ್ನೇ ಪರಿಶಿಲಿಸಿ ತಕ್ಷಣಅನುದಾನ ನೀಡುವಂತೆ ಡಿಸಿಯವರು ಸೂಚಿಸಿದರು.
ಮಲೆಕುಡಿಯ ಸಮುದಾಯದ ಜಮೀನಿನ ಪ್ರಕರಣವೊಂದು ರಾಜ್ಯ ಹೈಕೋರ್ಟ್ನಲ್ಲಿದ್ದು ತಮ್ಮದಲ್ಲದ ತಪ್ಪಿಗಾಗಿ ನಾವು ಕೋರ್ಟ್ಗೆ ಅಲೆಯಬೇಕಾಗಿದೆ. ಆ ಕೇಸಿನಿಂದ ಮುಕ್ತಿ ನೀಡಿ ಎಂದು ಸ್ಥಳಿಯರು ವಿನಂತಿಸಿದರು. ಇದಕ್ಕುತ್ತರಿಸಿದ ಜಿಲ್ಲಾಧಿಕಾರಿಯವರು ಈ ಬ್ಗಗೆ ಪರೀಶೀಲನೆ ನಡೆಸಲಾಗುದು ನ್ಯಾಯಾಲಯದ ಪ್ರಕರಣದಲ್ಲಿ ವ್ಯವಹರಿಸಲು ಉಚಿತ ಕಾನೂನು ನೆರವು ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದರು.
ಕಳೆದ ಭೇಟಿಯ ನಂತರ ಬಾಂಜಾರು ಮಲೆಗೆ ಸುಮಾರು 30ಲಕ್ಷ ರೂ.ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣ, ಬಾಂಜಾರು ಅಂಗನವಾಡಿ-ಸಮುದಾಯ ಭವನ, ನೀರಿನ ನೀರಿನಟ್ಯಾಂಕ್ ಅಳವಡಿಕೆ, 18 ಮಂದಿ ಯುವತಿಯರಿಗೆ ಹೊಲಿಗೆ ಯಂತ್ರ ಮತ್ತು ತಲಾ 2 ಸಾವಿರದಂತೆ ಮೂರು ತಿಂಗಳು ಭತ್ತೆ ನೀಡಲಾಗಿದೆ. 15 ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ, ಪ್ರತಿ ತಿಂಗಳ ೪ನೇ ಸೋಮವಾರ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಆರೋಗ್ಯ ಸಪಾಸಣೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿತಾಪಂಕಾರ್ಯನಿರ್ವಾಹಣಾಧಿಕಾರಿ ಕೆ.ಎನ್. ಮಹಾಂತೇಶ್,ಜಿ. ಪಂ.ಇಂಜಿನಿಯರಿಂಗ್ ಉಪ ವಿಭಾಗದ ಸ. ಕಾರ್ಯಪಾಲಕಇಂಜಿನಿಯರ್ಸಿ.ಆರ್. ನರೇಂದ್ರ, ಬೆಳ್ತಂಗಡಿ ಮೆಸ್ಕಾಂ ಸ. ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ, ಸಿಡಿಪಿಓ ಪುಟ್ಟಸ್ವಾಮಿ, ನಿರ್ಮಿತಿಕೇಂದ್ರ ನವೀನ್, ತೋಟಗಾರಿಕೆಇಲಾಖೆಯ ದಿವ್ಯಾ ಸೇರಿದಂತೆಇತರ ಇಲಾಖಾಕಾರಿಗಳು ಉಪಸ್ಥಿತರಿದ್ದರು.
ಬಾಂಜಾರು ಮಲೆಯ ನಾಗರಿಕರುಇದುವರೆಗೆ ಮತದಾನ ಮಾಡಲು ಸುಮಾರು 30 ಕಿಮೀ ದೂರದಗಂಡಿಬಾಗಿಲು ಶಾಲೆಯಲ್ಲಿ ಮತದಾನ ಮಾಡಬೇಕಿತ್ತು. ಈ ವಿಚಾರವನ್ನುಗಂಭೀರವಾಗಿ ತೆಗೆದುಕೊಂಡ ಡಿಸಿಯವರು ಈ ವರ್ಷದ ಗ್ರಾಪಂ ಚುನಾವಣೆ ಬಾಂಜಾರಿನಲ್ಲಿಯೇ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಮಾಡಿದ್ದಾರೆ. ಈ ಮತಗಟ್ಟೆ 102ಎ ಎಂದು ಹೆಸರಿಸಲಾಗಿದ್ದು ಸಭೆಯ ಪ್ರಾರಂಭಕ್ಕೆ ಮೊದಲು ಸ್ಥಳೀಯರಾದ ಹಿರಿಯರೊಬ್ಬರ ಕೈಯಿಂದ ಚುನಾವಣೆಯ ಸೂಚನಾ ಫಲಕವನ್ನು ಅಂಟಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.