ವಾಷಿಂಗ್ಟನ್: ಅಮೆರಿಕಾ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿರುವ ಇಬ್ಬರು ಭಾರತೀಯ ಸಂಜಾತ ಉದ್ಯಮಿಗಳನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸನ್ಮಾನಿಸಿದ್ದಾರೆ.
ಶರದ್ ಟಕ್ಕರ್ ಮತ್ತು ಕರಣ್ ಅರೋರ ಅವರು ಟ್ರಂಪ್ ಅವರಿಂದ ಸನ್ಮಾನಿತರಾಗಿದ್ದಾರೆ.
ಟಕ್ಕರ್ ಅವರು ಪೊಲಿಮರ್ ಟೆಕ್ನಾಲಜಿಸ್ನ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಗೆ ಮೈನಾರಿಟಿ ಎನರ್ಜಿ ಫರ್ಮ್ ಆಫ್ ದಿ ಇಯರ್ ಪ್ರಶಸ್ತಿ ಸಿಕ್ಕಿದೆ.
ಅರೋರ ಅವರು ನ್ಯಾಚುರಲ್ ವಿಟಮಿನ್ ಲ್ಯಾಬ್ಸ್ನ ನಿರ್ದೇಶಕರಾಗಿದ್ದಾರೆ. ಇದಕ್ಕೆ ಪೈನಾರಿಟಿ ಎಕ್ಸ್ಪೋರ್ಟ್ ಫರ್ಮ್ ಆಫ್ ದಿ ಇಯರ್ ಪ್ರಶಸ್ತಿ ದೊರಕಿದೆ. ನೈಸರ್ಗಿಕ ಆರೋಗ್ಯ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ 24 ವರ್ಷಗಳ ಅನುಭವ ಈ ಸಂಸ್ಥೆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.