ನವದೆಹಲಿ: ಅನ್ನ ಹಾಕಿ ಬೆಳೆಸಿದ ತನ್ನ ಒಡೆಯನನ್ನು ಕೊಲ್ಲಲು ಬಂದ ದುಷ್ಕರ್ಮಿಗಳನ್ನು ಅಟ್ಟಾಡಿಸಿ ಓಡಿಸುವ ಮೂಲಕ ಶ್ವಾನ ಇದೀಗ ಎಲ್ಲರ ಮನೆ ಮಾತಾಗಿದೆ.
ದೆಹಲಿಯ ಮಂಗಳ್ಪುರಿಯಲ್ಲಿ ಈ ಘಟನೆ ನಡೆದಿದ್ದು, ರಾಕೇಶ್ ಸಿಂಗ್ ಎಂಬುವವರ ತನ್ನ ಸಾಕು ನಾಯಿ ಟೈಸನ್ಗೆ ಊಟ ಹಾಕಲೆಂದು ಮನೆಯಿಂದ ಹೊರ ಬಂದ ವೇಳೆ 8 ಮಂದಿ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದರು.
ತಕ್ಷಣವೇ ಕಾರ್ಯಪ್ರವೃತ್ತವಾದ ಟೈಸನ್ ದುಷ್ಕರ್ಮಿಗಳ ಮೈಮೇಲೆ ಎರಗಿ ಜೋರಾಗಿ ಅರಚಾಡಿತು. ಈ ವೇಳೆ ಅದಕ್ಕೂ ಗಾಯಗಳಾಗಿದೆ. ಆದರೂ ಛಲ ಬಿಡದ ಅದು ಒಡೆಯನನ್ನು ಉಳಿಸಿಕೊಂಡಿದೆ.
ಅಲ್ಲದೇ ಒಬ್ಬ ದುಷ್ಕರ್ಮಿಯ ಕಾಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಅದು ಅಕ್ಕಪಕ್ಕದವರು ಬಂದು ಆತನನ್ನು ಹಿಡಿಯುವವರೆಗೂ ಬಿಡಲಿಲ್ಲ.
ಕೆಲ ವರ್ಷಗಳ ಹಿಂದೆ ಅನಾಥವಾಗಿ ಬೀದಿಯಲ್ಲಿ ಓಡಾಡುತ್ತಿದ್ದ ಟೈಸನನ್ನು ಸಿಂಗ್ ಕರೆ ತಂದು ಮುದ್ದಿನಿಂದ ಸಾಕುತ್ತಿದ್ದರು. ಆ ಋಣವನ್ನು ಟೈಸನ್ ಅವರ ಜೀವ ಕಾಪಾಡುವ ಮೂಲಕ ಸಂದಾಯ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.