“ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ, ಹಿಂದೂ ಧರ್ಮಕ್ಕೆ ಹೆಸರಿಡಲು ಬ್ರಿಟೀಷರು ಬರಬೇಕಾಯಿತು, ಇದೂ ಒಂದು ಧರ್ಮವೆ?”
ನೂರಕ್ಕೆ ನೂರರಷ್ಟು ನಿಜವಾದ ಮಾತು. ಯಾಕೆಂದರೆ,
ಹಿಂದೂ ಧರ್ಮ ಅಪ್ಪ ಅಮ್ಮ ಇಲ್ಲದ ಧರ್ಮ. ಹೌದು, ಜಗತ್ತಿನ ಬಹುತೇಕ ಧರ್ಮಗಳು ಒಂದು ವ್ಯಕ್ತಿಯಿಂದ ಆರಂಭವಾಗಿದೆ. ಕಾಲಗಣನೆಯ ಲೆಕ್ಕಕ್ಕೆ ಸಿಗುವಷ್ಟು ಹೊಸತಾಗಿದೆ. ಆದರೆ ಈ ಸನಾತನ ಧರ್ಮವು ಯಾವ ವ್ಯಕ್ತಿಗೂ ಆರೋಪಿಸಲಾಗದ, ಯಾವ ಕಾಲಘಟ್ಟಕ್ಕೂ ನಿಲುಕದಷ್ಟೂ ಪುರಾತನವಾಗಿದೆ. ಹಾಗಾಗಿ ಈ ಧರ್ಮವು ಒಬ್ಬ ಅಪ್ಪ ಯಾ ಒಬ್ಬ ಅಮ್ಮನಿಂದ ಸೃಜಿಸಿದ್ದಲ್ಲ. ಅಪ್ಪ ಅಮ್ಮನಿಗೂ ಮೀರಿದ ಕಾಲದೊಂದಿಗೆ ಘನೀಕೃತಗೊಂಡ ಒಂದು ಸಂಸ್ಕಾರಯುತ ವಿಚಾರಧಾರೆಯ ಸುಧೆ.
ಇದಕ್ಕೊಂದು ಹೆಸರಿಡಲು ಬ್ರಿಟೀಷರು ಬರಬೇಕಾಯಿತು: ಹೌದು ಮೂಲದಲ್ಲಿ ಇದು ಹಿಂದೂ ಧರ್ಮವಲ್ಲ ಇದು ಸನಾತನ ಧರ್ಮ. ಭಗವದ್ಗೀತೆ ಮುಂತಾದ ಗ್ರಂಥಗಳೂ ಇದನ್ನೇ ಸಾರಿದೆ. ಆದರೆ, ಸನಾತನ ಧರ್ಮ ಎನ್ನುವುದು ಅದರ ಒಟ್ಟು ಸಾರಕ್ಕೆ ಹಿಡಿದ ಕೈಗನ್ನಡಿ. ಬ್ರಿಟೀಷರು ಈ ಧರ್ಮವನ್ನು ದೇಶದ ಹೆಸರಿನೊಂದಿಗೆ ಸಮೀಕರಿಸಿ ಹೇಳಿದರು. ಒಂದು ಅಡ್ಡ ಹೆಸರು (nick name) ಇಟ್ಟಂತೆ.
ಇದೂ ಒಂದು ಧರ್ಮವೆ? ಹೌದು ಇದು ಒಂದು ಬರಿಯ ಧರ್ಮವಲ್ಲ. ಜಗತ್ತಿನ ಅತಿ ಪುರಾತನವೂ, ಹಲವು ಜ್ಞಾನ ಸಾರವನ್ನು ಒಳಗೊಂಡ ಶ್ರೇಷ್ಠ ಧರ್ಮ. ಹಲವು ಧರ್ಮಗಳ ಮಾತೃ ಧರ್ಮ. ಬೇರೆ ಧರ್ಮಗಳು ಹೆಣ್ಣಿಗೆ ಅಡುಗೆ ಮನೆಯೇ ಪವಿತ್ರ ಎಂದು ಹೇಳುತ್ತಿರುವಾಗ ಘೋಶ, ಲೋಪಮುದ್ರ, ಮೈತ್ರೇಯಿ, ಗಾರ್ಗಿ ಮುಂತಾದ ಮಹಿಳೆಯರಿಗೂ ಸಮಾನ ಪಾಂಡಿತ್ಯ ಕೊಟ್ಟ, ಹೆಣ್ಣನ್ನು ದೈವಿಕ ಶಕ್ತಿಯಾಗಿ ಕಂಡ ಈ ಧರ್ಮವು ಬರಿ ಧರ್ಮವಲ್ಲ ಶ್ರೇಷ್ಠ ಧರ್ಮ.
ಕುವೆಂಪು ಅವರು ಹೇಳುವಂತೆ “ಉತ್ತಮ ಶಿಲ್ಪಿ ಕಟ್ಟಿದ ದೇವಾಲಯದಲ್ಲಿ ಅದು ಹಳತಾಗುತ್ತ ಬಂದಂತೆಲ್ಲ ಇಲಿ ಹಲ್ಲಿ ಬಾವಲಿ ಮೊದಲಾದ ಅನಾಹೂತ ಜೀವಜಂತುಗಳೂ ಗೂಡು ಬೀಡು ಮಾಡುವುದುಂಟು” ಅಂತೆಯೇ ಹಲವು ಜನಾಂಗದ ದಾಳಿ ಮುಂತಾದವುಗಳಿಗೆ ತುತ್ತಾಗಿ ಈ ಸನಾತನ ಧರ್ಮವೂ ಅನೇಕ ಮೂಢಾಚಾರ, ಕಂದಾಚಾರ, ಶ್ರೇಣಿಕೃತ ವ್ಯವಸ್ಥೆಗೆ ತುತ್ತಾಗಿದ್ದು ನಿಜ. ಆದರೆ ಆ ಎಲ್ಲಾ ಟೀಕೆ ಟಿಪ್ಪಣಿಯನ್ನು ಸ್ವೀಕರಿಸಿ ಬದಲಾವಣೆಗೆ ತೆರೆದುಕೊಂಡದ್ದೂ ಅಷ್ಟೇ ಸತ್ಯ. ಕುವೆಂಪು ಅವರು ಮುಂದುವರೆದು ಹೇಳುತ್ತಾರೆ “ದೇವಾಲಯಕ್ಕೆ ಪೂಜೆಗೆಂದು ಹೋಗುವವರು ಯಾರೂ, ಅಲ್ಲಿವೆ ಎಂಬ ಒಂದು ಕಾರಣದಿಂದಲೆ, ಇಲಿ ಹಲ್ಲಿ ಬಾವಲಿಗಳನ್ನು ಪೂಜಿಸುವುದಿಲ್ಲ” ಹಾಗೆಯೇ, ತದನಂತರದಲ್ಲಿ ಸೇರಿದ ಮೂಢಾಚಾರಗಳಿದೆ ಎನ್ನುವ ಕಾರಣಕ್ಕೆ ಈ ಸನಾತನ ಧರ್ಮವೇ ಸತ್ವ ಹೀನ ಎನ್ನುವುದು ಅಪ್ರಬುದ್ಧತೆ. ಹಾಗಾಗಿ ಗೌರಿಯವರು ಅಂದಂತೆ ಇದು ಬರೀ ಧರ್ಮವಲ್ಲ. ಇದು ಮಹಾನ್ ಧರ್ಮ.
ಗೌರಿಯವರು ಬರಿ ಸಾರ ಹೇಳಿದ್ದರು ನಾನು ಅದನ್ನು ವಿವರಿಸಿದ್ದೇನೆ ಅಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.