ಮೂಡುಬಿದಿರೆ: ವಿಕಿಪೀಡಿಯಾ ಅಸೋಸಿಯೇಶನ್ನ ಉದ್ಘಾಟನೆ ಹಾಗೂ ಮೂರು ದಿನಗಳ ಮಾಹಿತಿ ಕಾರ್ಯಾಗಾರಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ಗುರುವಾರ ನೀಡಲಾಯಿತು.
ಪ್ರಭು ಆಸ್ಪತ್ರೆಯ ಡಾ. ಕೃಷ್ಣ ಮೋಹನ ಪ್ರಭು, ವಿಕಿಪೀಡಿಯಾ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ವಿಶ್ವಕೋಶಗಳು ಜನರಿಂದ ದೂರವಿರುವಾಗ ವಿಕಿಪೀಡಿಯಾ ಜ್ಞಾನವನ್ನು ಪಸರಿಸಲು ಜನಸ್ನೇಹಿ ಕೆಲಸವನ್ನು ಮಾಡುತ್ತಿದೆ. ಯುವಜನರು ಪೂರ್ವಾಗ್ರಹವಿಲ್ಲದೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕನ್ನಡದ ಹೆಚ್ಚಿನ ಲೇಖನಗಳು ವಿಕಿಪೀಡಿಯಾದಲ್ಲಿ ಪ್ರಕಟಗೊಂಡು ಭಾಷೆಯನ್ನು ಸಮೃದ್ಧ ಮಾಡುವ ಕೆಲಸ ಯುವ ಸಮೂಹದಿಂದಾಗಬೇಕು. ಜ್ಞಾನ ಸಂಪಾದನೆಗೆ ಉತ್ತಮ ಅವಕಾಶ ನೀಡುವ ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಪ್ರಕಟಿಸುವ ಮುನ್ನ ಅಧ್ಯಯನ, ವಿಮರ್ಶೆ ಅಗತ್ಯ ಎಂದರು.
ಕರಾವಳಿ ವಿಕಿಪೀಡಿಯನ್ಸ್ ಹಾಗೂ ಸಂಪಾದಕ ಡಾ. ಪವನಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಪಾರ ಮಾಹಿತಿಗಳ ಕಣಜ ವಿಕಿಪೀಡಿಯಾ. ಇದರ ಮೂಲಕ ಬರವಣಿಗೆಯಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಸಾಧ್ಯ. ಬೇರೆಯವರ ಬರಹಗಳನ್ನು ನಕಲು ಮಾಡುವಂತಿಲ್ಲ. ತರ್ಕಬದ್ಧ ಆಲೋಚನೆ, ನಿರಂತರ ಸಂಶೋಧನಾ ಪ್ರವೃತ್ತಿ, ಬೇರೆ ಮೂಲದಿಂದ ಮಾಹಿತಿ ಸಂಗ್ರಹಿಸಿ ಅಧ್ಯಯನ ಪೂರ್ಣವಾಗಿ ಬರೆದ ಲೇಖನಗಳಿಗೆ ಇಲ್ಲಿ ಅವಕಾಶವಿದೆ. ಸ್ಥಳೀಯ ಮಾಹಿತಿಗಳಿಗೆ ಅವಕಾಶ ವಿಕಿಪೀಡಿಯಾದ ಹೆಚ್ಚುಗಾರಿಕೆ. ಪ್ರಾದೇಶಿಕ ಭಾಷೆಯಲ್ಲೇ ಈ ಮಾಹಿತಿಗಳು ವಿಕಿಪೀಡಿಯಾದಲ್ಲಿ ಸಿಗುವಂತಾದರೆ ಭಾಷಾ ಬೆಳವಣಿಗೆಯಾಗುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶ್ರೀಗೌರಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.