ಏತಡ್ಕ : ಸ್ವಾವಲಂಬಿ ಕೃಷಿ ಬದುಕಿಗೆ ದೇಶೀಯ ಗೋ ಸಾಕಾಣಿಕೆ ಅನಿವಾರ್ಯ . ಅತ್ಯಲ್ಪ ವೆಚ್ಚದಲ್ಲಿ ಗೋ ಪಾಲನೆ ಸಾಧ್ಯ . ಮುಂದಿನ ದಿನಗಳಲ್ಲಿ ಎಲ್ಲ ತರಹದ ಗೊಬ್ಬರಗಳನ್ನು ಖರೀದಿಸಿಯೇ ಕೃಷಿಗೆ ಅಳವಡಿಸುವುದು ಅಸಾಧ್ಯ ವಾಗ ಬಹುದು . ಯಾಕ್ಕೆಂದರೆ ಎಲ್ಲ ಸಬ್ಸೀಡಿಗಳು ರದ್ದಾಗುವ ದಿನಗಳು ಸನಿಹದಲ್ಲಿದೆ . ಏರುತ್ತಿರುವ ಒಟ್ಟು ವೆಚ್ಚದಿಂದ ಅವಲಂಬನೆಯ ಕೃಷಿ ಕಾರ್ಯಗಳು ಲಾಭದಾಯಕ ವಾಗಲಾರದು .
ಕೃಷಿಗೆ ಬೇಕಾದ ಗೊಬ್ಬರ ,ಕೀಟ ನಿಯಂತ್ರಕ ,ಪುಷ್ಟಿದಾಯಕ ಆಹಾರ ,ತಂಡವಾಗಿ ಮನೆಮಂದಿಯನ್ನು ಗೋವು ಬಂದಿಸುವುದನ್ನು ನಾವು ಗಮನಿಸ ಬೇಕು . ಗೋ ರಹಿತ ಕೃಷಿ ಬದುಕು ಸುಸ್ತಿರವಾಗಿಲ್ಲ. ಗೋವು ಇಲ್ಲದ ಊರಲ್ಲಿ ಕಾಡು ಹಂದಿಗಳು ಮೇಳೈಸುತ್ತಿವೆ .ಹಾಡು ಹಗಲೇ ಮನುಷ್ಯರು ,ಬೆಳೆಯ ಮೇಲೆ ಧಾಳಿ ಇಡುತ್ತಿವೆ . ಪ್ರೀತಿ ,ವಾತ್ಸಲ್ಯದ ಶಿಕ್ಷಣಕ್ಕೆ ಗೋವುಗಳೇ ಮನೆಮಂದಿಗೆ ಶಿಕ್ಷಕರು ”ಎಂಬುದಾಗಿ ಚಂದ್ರಶೇಖರ್ ಏತಡ್ಕ ಗೋ ರಥ ಯಾತ್ರೆಯ ಸಂಧರ್ಬದಲ್ಲಿ ಗೋಸಂದೇಶ ನೀಡಿದರು .
ಆರಂಬದಲ್ಲಿ ವೈ ಕೆ ಗಣಪತಿ ಭಟ್ ಸ್ವಾಗತಿಸುತ್ತಾ ಮೇ 21 ರಿಂದ ಪೆರ್ಲ ಬಜಕುಡ್ಲಿನಲ್ಲಿ ಲೋಕಾರ್ಪಣೆ ಗೊಳ್ಳಲಿರುವ ಅಮೃತಧಾರಾ ಗೋಶಾಲೆಯ ನೂತನ ಗೋಲೋಕದ ಕುರಿತು ಮಾಹಿತಿ ನೀಡಿದರು . ಮಾನಸ ಮುಂಚಿಕಾನ ಸ್ವರಚಿತ ಗೋ ಗೀತೆ ಹಾಡಿದರು . ಏತಡ್ಕ ಸಮೀಪ ಕೂಟೇಲು ಸೇತುವೆ ಬಳಿಯೂ ಶ್ರೀಮತಿ ಶ್ರೀದೇವಿ ಭಟ್ ನೇತ್ರತ್ವದಲ್ಲಿ ಭವ್ಯ ಸ್ವಾಗತ ನೀಡಲಾಯಿತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.