ಬೆಳ್ತಂಗಡಿ : ತಾಲೂಕಿನಲ್ಲಿ ಗ್ರಾ.ಪಂ. ಚುನಾವಣಾ ಚಟುವಟಿಕೆಗಳು ಗರಿದೆಗರಿದ್ದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇದೀಗ ಸ್ಧಾನಗಳ ಮೀಸಲಾತಿಯು ಪ್ರಕಟಗೊಂಡಿದ್ದು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. ತಾಲೂಕಿನ 48 ಗ್ರಾಮ ಪಂಚಾಯತ್ಗಳ ಪೈಕಿ 46 ಗ್ರಾಮ ಪಂಚಾಯತುಗಳ 621 ಸ್ಧಾನಗಳಿಗೆ ಚುನಾವಣೆ ನಡೆಯುತ್ತಿದೆ.
ತಾಲೂಕಿನಲ್ಲಿ ಹೊಸದಾಗಿ ರಚನೆಯಾದ 5 ಪಂಚಾಯತುಗಳು ಸೇರಿದಂತೆ 48 ಗ್ರಾಮ ಪಂಚಾಯತುಗಳಿದ್ದು ಇದರಲ್ಲಿ ವೇಣೂರು ಮತ್ತು ಆರಂಬೋಡಿ ಗ್ರಾಮ ಪಂಚಾಯತುಗಳಿಗೆ ಅವಧಿ ಮುಗಿಯದ ಹಿನ್ನಲೆಯಲ್ಲಿ ಈಗ ಚುನಾವಣೆ ನಡೆಯುತ್ತಿಲ್ಲ. ತಾಲೂಕಿನಲ್ಲಿ 1,01,509 ಮಂದಿ ಪುರುಷರು ಹಾಗು 98,756 ಮಂದಿ ಮಹಿಳೆಯರು ಸೇರಿದಂತೆ 2,00,265 ಮಂದಿ ಮತದಾರರಿದ್ದಾರೆ. ತಾಲೂಕಿನಲ್ಲಿ 211 ವಾರ್ಡ್ಗಳಿದ್ದು ಅಷ್ಟೇ ಸಂಖ್ಯೆಯ ಮತಗಟ್ಟೆಗಳನ್ನು ರಚಿಸಲಾಗಿದೆ. ಹೆಚ್ಚುವರಿ ಮತಗಟ್ಟೆಯ ಬಗ್ಗೆ ಇನ್ನೂಯಾವುದೇಕ್ರಮಕೈಗೊಂಡಿಲ್ಲ.
ಈ ಮೊದಲು ಕಳುಹಿಸಲಾಗಿದ್ದ ಮಹಿಳಾ ಮೀಸಲಾತಿಯಲ್ಲಿ ಶೇ.60 ಕ್ಕಿಂತಲೂ ಹೆಚ್ಚು ಸ್ಥಾನಗಳಿತ್ತು.ಇದೀಗ ಆಯೋಗದಿಂದ ಬಂದ ಪ್ರಕಟಿಸಿದರಲ್ಲಿ 50:50 ಸ್ಥಾನಗಳನ್ನು ಹಂಚಲಾಗಿದೆ.ಶೇ.50ರಷ್ಟು ಮಹಿಳಾ ಮೀಸಲಾತಿಯಿದೆ.ಪಕ್ಷರಹಿತವಾಗಿ ಚುನಾವಣೆಗಳು ನಡೆಯುತ್ತಿದ್ದರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಿದ್ದತೆ ಆರಂಭಿಸಿದ್ದಾರೆ. ಮಹಿಳಾ ಮೀಸಲು ಸ್ಧಾನಗಳೆ ಹೆಚ್ಚಾಗಿರುವುದರಿಂದಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ.
ಮೇ.10 ರಿಂದ ನೀತಿ ಸಂಹಿತೆಜಾರಿಯಾಗಲಿದೆ. ಮೇ.11 ರಿಂದ ನಾಮಪತ್ರ ಸ್ವೀಕಾರ. ಮೇ.18 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮೇ.19 ನಾಮಪತ್ರಗಳ ಪರಿಶೀಲನೆ. ಮೇ.21 ನಾಮಪತ್ರ ಹಿಂಪಡೆಯಲುಕೊನೆಯ ದಿನ. ಮೇ.29 ರಂದು ಚುನಾವಣೆ, ಜೂ.5 ರಂದು ಮತಎಣಿಕೆ ಕಾರ್ಯ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನಲ್ಲಿಗ್ರಾ.ಪಂ ಚುನಾವಣೆ ಪಕ್ಷಿನೋಟ-2010:ಒಟ್ಟು ಪಂಚಾಯತಿಗಳು: 43. ಒಟ್ಟು ಮತಗಟ್ಟೆಗಳು: 194. ಒಟ್ಟು ಸ್ಥಾನಗಳು: 618
ಬೆಳ್ತಂಗಡಿ ತಾಲೂಕಿನಲ್ಲಿಗ್ರಾ. ಪಂ ಚುನಾವಣೆ ಪಕ್ಷಿನೋಟ-2015: ಒಟ್ಟು ಪಂಚಾಯತಿಗಳು: 48, ಒಟ್ಟು ಮತಗಟ್ಟೆಗಳು : 211, ಒಟ್ಟು ಸ್ಥಾನಗಳು: 667 , ಒಟ್ಟು ಮತದಾರರು: 2,00,265, ಪುರುಷರು: 1,01,509 , ಮಹಿಳೆಯರು: 98,756,ಎರಡು ಸದಸ್ಯರುಳ್ಳ ಕೇತ್ರಗಳ ಸಂಖ್ಯೆ: 42, ಮೂರು ಸದಸ್ಯರುಳ್ಳ ಕ್ಷೇತ್ರಗಳ ಸಂಖ್ಯೆ: 87, ನಾಲ್ಕು ಸದಸ್ಯರುಳ್ಳ ಕ್ಷೇತ್ರಗಳ ಸಂಖ್ಯೆ: 46, ಐದು ಸದಸ್ಯರುಳ್ಳ ಕ್ಷೇತ್ರಗಳ ಸಂಖ್ಯೆ: 15
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.