ನವದೆಹಲಿ: ಮುತ್ತಿನ ಮಣಿಗಳಿಂದ ಚಿತ್ರಿಸಲಾದ ಒಂದು ವಿಶಿಷ್ಟ ಕಲಾಕೃತಿಯನ್ನು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಲಾಯಿತು.
ಈ ಕಲಾಕೃತಿಯಲ್ಲಿ ಭಾರತದ ಭೂಪಟ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸಲಾಗಿದೆ.
ಈ ಕಲಾಕೃತಿಯನ್ನು ಸಿದ್ಧಪಡಿಸಲು ಸುಮಾರು 5 ಲಕ್ಷದಷ್ಟು ಮುತ್ತಿನ ಮಣಿಗಳು ಮತ್ತು 10 ಕಿಲೋಮಿಟರ್ನಷ್ಟು ಉದ್ದದ ದಾರವನ್ನು ಉಪಯೋಗಿಸಲಾಗಿದೆ ಎಂದು ಕಲಾಕೃತಿಯ ವಿನ್ಯಾಸಗಾರ್ತಿ ಖುಷಬೂ ಅಕಾಶ್ ದಾವ್ಡಾ ಹೇಳಿದ್ದಾರೆ.
7 ಅಡಿ ಎತ್ತರ ಮತ್ತು 7 ಅಡಿ ಅಗಲದ ಚೌಕಾಕಾರದಲ್ಲಿರುವ ಈ ಚಿತ್ರ ಸಿದ್ಧವಾಗಲು ಸುಮಾರು 850 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ.
ರಾಜಕೋಟ್ನ ಸಂಸದ ಮೋಹನ್ಭಾಯಿ ಕುಂದರಿಯಾ ಈ ವೇಳೆ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.