ನವದೆಹಲಿ: ವನ್ನಾಕ್ರೈ ರ್ಯಾನ್ಸಂವೇರ್ ದಾಳಿಯಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ಜನತೆಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. 36.4 ಮಿಲಿಯನ್ ಆಂಡ್ರಾಯ್ಡ್ ಆಧಾರಿತ ಫೋನ್ಗಳಿಗೆ ಹೊಸ ಮಾಲ್ವೇರ್ ಜೂಡಿಯನ್ನು ಇನ್ಫೆಕ್ಟ್ ಮಾಡಲಾಗಿದೆ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಚೆಕ್ ಪಾಯಿಂಟ್ ಹೇಳಿದೆ.
ಜೂಡಿಯು ಜಾಹೀರಾತು-ಕ್ಲಿಕ್ ಮಾಲ್ವೇರ್ ಆಗಿದ್ದು, ಕೊರಿಯನ್ ಕಂಪನಿ ಅಭಿವೃದ್ಧಿಪಡಿಸಿದ 41 ಅಪ್ಲಿಕೇಶನ್ಗಳಲ್ಲಿ ಕಂಡುಬಂದಿದೆ. ಇನ್ಪೆಕ್ಟ್ ಮಾಡಿದ ಡಿವೈಸ್ ಮೂಲಕ ಜಾಹೀರಾತುಗಳಿಗೆ ಅಪಾರ ಸಂಖ್ಯೆಯ ಸುಳ್ಳು ಕ್ಲಿಕ್ಗಳು ಆಗುವಂತೆ ಮಾಡುತ್ತದೆ. ಈ ಮೂಲಕ ವಂಚಕರಿಗೆ ಆದಾಯ ಸಿಗುತ್ತದೆ.
ಇದೊಂದು ಆಟೊ-ಕ್ಲಿಕಿಂಗ್ ಆಡ್ವೇರ್ ಆಗಿದ್ದು ಕೊರಿಯನ್ ಕಂಪನಿಯ 41 ಆಪ್ಗಳಲ್ಲಿ ಕಂಡುಬಂದಿದೆ. ಎಷ್ಟು ದೇಶಗಳು ಜೂಡಿ ಮಾಲ್ವೇರ್ನಿಂದ ಬಾಧಿತವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.