ಹಲವಾರು ಕಾರಣಗಳಿಂದಾಗಿ ಹಲವಾರು ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಅಥವಾ ಅರ್ಧಕ್ಕೆ ಶಾಲೆ ಬಿಡುತ್ತಾರೆ. ಇವರೆಲ್ಲ ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಆಗಿರುತ್ತಾರೆ. ಸರಿಯಾದ ವಯಸ್ಸಲ್ಲಿ ಸರಿಯಾದ ಶಿಕ್ಷಣ ಸಿಗದೆ ಇವರುಗಳ ಭವಿಷ್ಯ ಕಮರಿ ಹೋಗುತ್ತದೆ. ಬಾಲ ಕಾರ್ಮಿಕರಾಗಿ ದೌರ್ಜನ್ಯವನ್ನು ಸಹಿಸುತ್ತಾ ಇವರ ಬಾಲ್ಯವೂ ಕಮರುತ್ತದೆ.
ಇಂತಹ ಮಕ್ಕಳನ್ನು ಸರಿಯಾದ ಮಾರ್ಗಕ್ಕೆ ತರುವ ಸಲುವಾಗಿಯೇ ಹಲವಾರು ಸಂಘ ಸಂಸ್ಥೆಗಳು ಶ್ರಮಪಡುತ್ತಿವೆ. ಅಂತಹುಗಳ ಪೈಕಿ ’ಕಲಿಯುವ ಮನೆ’ಯೂ ಒಂದು. ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳಿಗೆಂದೇ ಮೈಸೂರಿನ ಕುಗ್ರಾಮವೊಂದರಲ್ಲಿ ಈ ವಿಭಿನ್ನ ಶಾಲೆ ಇದೆ.
ಇದು ಸಾಮಾನ್ಯ ಶಾಲೆಗಳಂತೆ ಇಲ್ಲ, ಇಲ್ಲಿ ಮಕ್ಕಳಿಗೆ ಯಾವ ಕಟ್ಟುಪಾಡುಗಳನ್ನೂ ವಿಧಿಸಲಾಗಿಲ್ಲ. ಶಾಲೆಯ ಆವರಣದಲ್ಲಿ ಮಕ್ಕಳು ಸ್ವತಂತ್ರರಾಗಿ ಓಡಾಡಬಹುದು, ತಮಗೆ ಬೇಕಾದುದನ್ನು ಮಾಡಬಹುದು. ಇವರನ್ನು ಶಿಕ್ಷಕರು ಗಮನಿಸುತ್ತಿರುತ್ತಾರೆ.
ಇಲ್ಲಿ ಗ್ರೇಡ್ಗಳಿಲ್ಲ ಬದಲಾಗಿ ತಂಡಗಳಿವೆ, ಒಂದೊಂದು ತಂಡಗಳಿಗೆ ಚೇತನ, ಚೈತನ್ಯ, ವಿವೇಕ ಎಂಬಿತ್ಯಾದಿ ಹೆಸರುಗಳನ್ನು ಇಡಲಾಗಿದೆ. ಮಕ್ಕಳ ಅಗತ್ಯ, ಆಶಯಗಳಿಗೆ ಅನುಗುಣವಾದ ಶಿಕ್ಷಣವನ್ನು ಅವರಿಗೆ ನೀಡಲಾಗುತ್ತದೆ. ಇಂಗ್ಲೀಷ್, ಕನ್ನಡ, ವಿಜ್ಞಾನ, ಸಮಾಜ, ಗಣಿತ, ನೈತಿಕ ಶಿಕ್ಷಣ, ಸ್ವಚ್ಛತೆ ಮುಂತಾದುವುಗಳನ್ನು ಕಲಿಸಿಕೊಡಲಾಗುತ್ತದೆ. ಇಲ್ಲಿ ಕಿಡ್ ಬ್ಯಾಂಕ್ ಇದು ಮಕ್ಕಳೇ ಇದನ್ನು ನಡೆಸುತ್ತಾರೆ. ನಕಲು ನ್ಯಾಯಾಲಯ ಇದೆ. ಚರ್ಚೆ, ಸಂವಾದಗಳು ಏರ್ಪಡುತ್ತವೆ.
ಗ್ರಾಮದಿಂದ ಬರುವ ಬಿಪಿಎಲ್ ಕುಟುಂಬದ 12 ವರ್ಷದ ಮಕ್ಕಳು ಇಲ್ಲಿ ಬಂದು ದಾಖಲಾಗಬಹುದು. ಸಂದರ್ಶನವಾಗಲಿ, ಎಂಟರೆನ್ಸ್ ಎಕ್ಸಾಂ ಆಗಲಿ ಇಲ್ಲಿರುವುದಿಲ್ಲ. ಜಾತಿ, ಧರ್ಮವನ್ನು ದಾಖಲಾತಿಯ ವೇಳೆ ಹೇಳಬೇಕಾಗಿಯೂ ಇಲ್ಲ. ಪ್ರತಿ ಹತ್ತು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಇಲ್ಲಿ ಇದ್ದಾರೆ. ಕೆಲವರು ಸ್ವಯಂ ಸೇವಕರಾಗಿದ್ದರು, ಕೆಲವರು ವೇತನಕ್ಕಾಗಿ ಇಲ್ಲಿ ಕೆಲಸ ಮಾಡುತ್ತಿದೆ.
ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದ ಅನಂತ್ ಎಂಬ ಎಂಜಿನಿಯರ್ ಈ ಶಾಲೆಯನ್ನು ಸ್ಥಾಪಿಸಿದ್ದಾರೆ. ಬಡವರ, ಕಾರ್ಮಿಕರ ಮಕ್ಕಳೇ ಇಲ್ಲಿ ಹೆಚ್ಚಾಗಿ ಬರುತ್ತಿದ್ದಾರೆ. ಅವರ ಆಶಯಗಳಿಗೆ ತಕ್ಕಂತ ಪ್ರಾಯೋಗಿಕ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.