ವಾಷಿಂಗ್ಟನ್: ವಿಶ್ವಸಂಸ್ಥೆ ಶಾಂತಿಸ್ಥಾಪನೆಗಾಗಿ ಕಳೆದ ಆರು ದಶಕಗಳಿಂದ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿರುವ ಭಾರತಕ್ಕೆ ವಿಶ್ವಸಂಸ್ಥೆ ಗೌರವ ಸಲ್ಲಿಸಿದೆ.
ವಿಶ್ವಸಂಸ್ಥೆ ಶಾಂತಿ ಸ್ಥಾಪನೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾರತದ ಅಮೆರಿಕ ರಾಯಭಾರಿ ಅರುಣ್ ಕೆ.ಸಿಂಗ್ ಅವರು ವಿಶ್ವಸಂಸ್ಥೆಯ ವತಿಯಿಂದ ಭಾರತಕ್ಕೆ ನೀಡಲಾದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಭಾರತ 180,000 ಪಡೆಗಳನ್ನು ವಿಶ್ವಸಂಸ್ಥೆಯ ಶಾಂತಿ ಪಾಲನೆಗಾಗಿ ನೀಡಿದೆ, ಯಾವುದೇ ದೇಶವೂ ಇಷ್ಟು ಪ್ರಮಾಣದ ಪಡೆಗಳನ್ನು ನೀಡಿಲ್ಲ. ಅಲ್ಲದೇ ವಿಶ್ವಸಂಸ್ಥೆ ಕೈಗೊಂಡ 69 ಕಾರ್ಯಾಚರಣೆಯಲ್ಲಿ 44 ಕಾರ್ಯಾಚರಣೆಯಲ್ಲಿ ಭಾರತ ಪಾಲ್ಗೊಂಡಿದೆ. ಈ ಕಾರ್ಯಾಚರಣೆಯ ವೇಳೆ 158 ಭಾರತೀಯ ಶಾಂತಿ ಪಾಲಕರು ಹತರಾಗಿದ್ದಾರೆ.
2015ರಲ್ಲೂ ಭಾರತ 8 ಸಾವಿರ ಸಿಬ್ಬಂದಿಯನ್ನು ವಿಶ್ವಸಂಸ್ಥೆ ಶಾಂತಿ ಪಾಲನ ಕಾರ್ಯಕ್ಕೆ ನಿಯೋಜಿಸಿದೆ,, ಮೊತ್ತ ಮೊದಲ ಬಾರಿಗೆ ಮಹಿಳೆಯರನ್ನೊಳಗೊಂಡ ಪೊಲೀಸ್ ಘಟಕವನ್ನು ಕಳುಹಿಸಿಕೊಟ್ಟಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಪಾಲನೆಗಾಗಿ ಕೊಡುಗೆಗಳನ್ನು ನೀಡಲು ಭಾರತ ಬದ್ಧವಾಗಿದೆ ಎಂದು ಅರುಣ್ ಸಿಂಗ್ ಪ್ರಶಸ್ತಿ ಸ್ವೀಕಾರದ ವೇಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.