ಬೆಂಗಳೂರು: ಅದ್ಯಾರೋ ಕೇಳಿದ್ರಂತೆ, 1 ಪ್ಲೇಟ್ ಇಡ್ಲಿಗೆ ಎಷ್ಟು ? ರೂಪಾಯಿ 20 ಎಂದು ಮಾಣಿ ಹೇಳಿದಾಗ, ಹಾಗಾದ್ರೆ ಚಟ್ನಿಗೆ ? ಎಂದು ಮರುಪ್ರಶ್ನೆ ಹಾಕಿದನಂತೆ ಗ್ರಾಹಕ. ಅದಕ್ಕೆ ಚಟ್ನಿ ಫ್ರೀ ಎಂದು ಮಾಣಿ ಹೇಳಿದ. ಹೌದಾ ! ನಾನು ಮನೆಯಿಂದ ಇಡ್ಲಿ ತಂದಿರುವೆ, ಉಚಿತವಾದ ಚಟ್ನಿ ಕೊಟ್ಟುಬಿಡು ಅಂದಿದ್ದನಂತೆ ಗ್ರಾಹಕ ಮಹಾಶಯ.
ಇದು ನಗೆಹನಿ ಅಷ್ಟೇ. ಬೆಂಗಳೂರಿನಲ್ಲಿರುವ ಒಂದು ಅಪರೂಪದ ಹೋಟೆಲ್ ನೆನಪಿಸಿಕೊಂಡಾಗೆಲ್ಲ ಇದು ನೆನಪಾಗದೇ ಇರದು. ಆ ಹೋಟೆಲ್ನಲ್ಲಿ ತಿಂಡಿಗಳು ಉಚಿತವಂತೆ, ಆದರೆ ಅಲ್ಲಿ ನೀವು ಕಳೆಯುವ ಸಮಯಕ್ಕೆ ಹಣ ನೀಡಬೇಕಂತೆ. ವಿಶೇಷ ಅಲ್ಲವೇ?
ಹೌದು. ದಿ ಮಿನ್ಯೂಟ್ ಬಿಸ್ಟ್ರೋ ಎಂಬ ಹೋಟೆಲ್ನ ವಿಶೇಷವೇ ಅದು. ಇನಾಯತ್ ಅನ್ಸಾರಿ ಹಾಗೂ ನಿಖಿಲ್ ಕಾಮತ್ ಇದರ ರೂವಾರಿಗಳು. ಪೇಪರ್ ಮಿನಿಟ್ ಕೆಫೆಗಳಂತೆ ಇದೂ ಒಂದು. ವಿದೇಶಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ. ಬೆಂಗಳೂರಿಗೆ ಇದು ಹೊಸ ಪರಿಚಯ.
ಒಂದು ನಿಮಿಷಕ್ಕೆ 8 ರೂಪಾಯಿಯಂತೆ ದರ ನಿಗದಿ ಮಾಡಲಾಗಿದೆಯಂತೆ. ಅಲ್ಲಿಯ ತಿಂಡಿಯನ್ನೇ ಸೇವಿಸಬೇಕೇಂಬ ನಿಯಮವೂ ಇಲ್ಲವಂತೆ. ನಿಮ್ಮ ಮನೆ ತಿಂಡಿ ಒಯ್ದರೂ ಅಭ್ಯಂತರವಿಲ್ಲ. ಏಕೆಂದರೆ ಅಲ್ಲಿ ಹಣ ನೀಡಬೇಕಿರುವುದು ತಿಂಡಿಗಲ್ಲ, ಸಮಯಕ್ಕೆ. ಬಹುಶಃ ಸಮಯ ಪ್ರಜ್ಞೆಯನ್ನೂ ಇಲ್ಲಿ ರೂಢಿಸಿಕೊಳ್ಳಬಹುದು ಎನಿಸುತ್ತದೆ.
ಸ್ನೇಹಿತರು, ಸಂಬಂಧಿಕರು, ವ್ಯವಹಾರ ಕುದುರಿಸುವವರು ಹೀಗೇ ಅನೇಕರು ತಮ್ಮ ಸಮಯವನ್ನು ಇಲ್ಲಿ ಕಳೆಯಬಹುದು. ಕಷ್ಟ-ಸುಖ ಹಂಚಿಕೊಳ್ಳಲೂ ಇಲ್ಲಿಗೆ ಬಂದು ಕೂರಬಹುದು. ಆದರೆ ಸಮಯದ ಅರಿವು ತಪ್ಪಿದರೆ ಮಾತ್ರ, ಬಿಲ್ ಏರುವುದರಲ್ಲಿ ಸಂಶಯವಿಲ್ಲ.
419, 2 ನೇ ಮುಖ್ಯರಸ್ತೆ, ಲಾಲ್ ಬಹದ್ದೂರ್ ನಗರ. ಈಸ್ಟ್ ಆಫ್ ಎನ್ಜಿಎಫ್ ಲೇಔಟ್, ಕಸ್ತೂರಿ ನಗರ, ಬೆಂಗಳೂರು. ಬೇಕಿದ್ದರೆ ನೀವು ಒಮ್ಮೆ ನಿಮ್ಮ ಸಮಯವನ್ನು ಪರೀಕ್ಷಿಸಿಕೊಳ್ಳಬಹುದು. ಟ್ರೈ ಮಾಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.