ಖ್ಯಾತಿ ಪಡೆಯುವುದಕ್ಕಾಗಿ ಸಮಾಜಿಕ ಜಾಲತಾಣಗಳನ್ನು ಯುವಕರು ಹೆಚ್ಚಾಗಿ ಬಳಸುತ್ತಾರೆ. ಆದರೆ ಆಂಧ್ರದ 106 ವರ್ಷದ ಅಜ್ಜಿಯೊಬ್ಬರು ಯುವಕರಿಗೆ ಕಠಿಣ ಸ್ಪರ್ಧೆಯೊಡ್ಡುವಂತೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ.
106 ವರ್ಷದ ಮಸ್ತಾನಮ್ಮ ಇದೀಗ ಯೂಟ್ಯೂಬ್ನಲ್ಲಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಅವರ ಕುಕ್ಕಿಂಗ್ ವೀಡಿಯೋ ಜನರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ.
ಇವರ ಮೊಮ್ಮಗ ಕೆ.ಲಕ್ಷ್ಮಣ್ ಮತ್ತು ಆತನ ಸ್ನೇಹಿತ ಶ್ರೀನಾಥ್ ರೆಡ್ಡಿಯವರು ‘ಕಂಟ್ರಿ ಫುಡ್’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಅದರಲ್ಲಿ ಮಸ್ತಾನಮ್ಮನವರ ಥರಥರನಾದ ಅಡುಗೆಗಳನ್ನು ನಾವು ವೀಕ್ಷಿಸಬಹುದಾಗಿದೆ.
ಪ್ರಸ್ತುತ ಮಸ್ತಾನಮ್ಮರಿಗೆ 25000 ಸಬ್ಸ್ಕ್ರೈಬರ್ಗಳಿದ್ದು ಅವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.