ನೋಡಲು ಭೀಮಕಾಯ ದೇಹವುಳ್ಳ ಜಟಾಧಾರಿ, ಹೆಗಲಿಗೆ ಧನುಷ್ಯ ಹಾಗೂ ಕೈಯಲ್ಲಿ ಪರಶು.
ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗು ಶಿವನ ಶಿಷ್ಯ. ಅವನು ರೇಣುಕಾಹಾಗು ಸಪ್ತರ್ಷಿ ಜಮದಗ್ನಿಯ ಪುತ್ರ. ಅವನು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದನು ಮತ್ತು ಅವನುಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬನು.
ಪರಶುರಾಮರ ಜನ್ಮಸ್ಥಳ
ಪರಶುರಾಮರ ಜನ್ಮಸ್ಥಳ ರೇಣುಕಾ ತೀರ್ಥವೆಂದು ಹೇಳಲಾಗುತ್ತಿದೆ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮ ದೇವರ ನೇರ ತಲೆಮಾರಿನವರಾಗಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.
ಭಗವಾನ್ ವಿಷ್ಣುವಿನ ಆರನೆಯ ಅವತಾರವೆಂದೇ ಖ್ಯಾತರಾಗಿರುವ ಮಹಾರ್ಷಿ ಪರಶುರಾಮರು ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಮತ್ತು ರೇಣುಕಾರ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಹುಟ್ಟುವಾಗಲೇ ಬ್ರಾಹ್ಮರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.
ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು. ಭೂಮಿಯ ಮೇಲೆ 21 ಬಾರಿ ಇಂತಹವರನ್ನು ಇವರೊಬ್ಬರೇ ವಧಿಸಿದ್ದಾರೆ. ಪರಶು ಎಂಬುದು ಕೊಡಲಿ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?! ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು.
ಹಿಂದೂ ಪುರಾಣದಲ್ಲಿ ಪರಶುರಾಮರನ್ನು ಕುರಿತ ಇನ್ನಷ್ಟು ಸತ್ಯಗಳು ಮರೆಯಾಗಿದ್ದು ಅವುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.