ವೇದಾರ್ಥಗಳನ್ನು ತಿಳಿಯಲು ಅಸಮರ್ಥರಾದವರಿಗೆ, ಅನಧಿಕಾರಿಗಳಿಗೆ ಬ್ರಹ್ಮಬಂಧುಗಳಿಗೆ ಪರತತ್ವದ ಪಾರಮ್ಯವನ್ನು ಅರ್ಥೈಸಿಕೊಡುವುದಕ್ಕಾಗಿ ಆ ಮೂಲಕ ಅವರೆಲ್ಲರಿಗೂ ಮೋಕ್ಷಸಿದ್ಧಿಯಾಗಬೇಕು ಎಂಬ ಭಾವನೆಯಿಂದ ಭಗವಾನ್ ವೇದವ್ಯಾಸರು ಹದಿನೆಂಟು ಪರ್ವಾತ್ಮಕವಾದ ಮಹಾಭಾರತವನ್ನು ರಚಿಸಿದರು.
ಹದಿನೆಂಟು ಪರ್ವಗಳು
ಸಂಭವ – ಸಭಾ – ಅರಣ್ಯ – ವಿರಾಟ – ಉದ್ಯೋಗ – ಭೀಷ್ಮ – ದ್ರೋಣ – ಕರ್ಣ – ಶಲ್ಯ – ಗದಾ – ಸೌಷುಪ್ತಿಕ – ಶಾಂತಿ – ಆನುಶಾಸನಿಕ – ಆಶ್ವಮೇಧಿಕ – ಮೌಸಲ – ಮಹಾಪ್ರಸ್ಥಾನ – ಸ್ವರ್ಗಾರೋಹಣ – ಭವಿಷ್ಯತ್ ಎಂದು.
ಈ ಹದಿನೆಂಟು ಪರ್ವಗಳಲ್ಲಿ ಒಂದಾದ ಭೀಷ್ಮಪರ್ವದಲ್ಲಿ ಮಹಾಭಾರತವೆಂಬ ಪಾರಿಜಾತದ ಮಕರಂದವೆನಿಸಿದ, ಶ್ರೀಕೃಷ್ಣಾರ್ಜುನರ ಸಂವಾದರೂಪವಾದ ಭಗವದ್ಗೀತೆಯನ್ನು ನಿಬಂಧನ ಮಾಡಿದ್ದಾರೆ.
ಈ ಹದಿನೆಂಟು ಅಧ್ಯಾಯಗಳಲ್ಲಿ ಆರಂಭದ ಆರು ಅಧ್ಯಾಯಗಳು ಜ್ಞಾನದ ಉಪಾಯವನ್ನು ತಿಳಿಸಿಕೊಡುತ್ತವೆ. ಮಧ್ಯದ ಆರು ಅಧ್ಯಾಯಗಳಲ್ಲಿ ಆ ಉಪಾಯ ಸಾಧ್ಯ ಆಗುವ ಬಗೆ ಹೇಗೆ? ಅರ್ಥಾತ್ ಭಕ್ತಿ – ಜ್ಞಾನ ಮೊದಲಾದ ಸಾಧನೆಗಳ ವಿವರಣೆಯು ನಿರೂಪಿತವಾಗಿದೆ. ಅಂತಿಮಘಟ್ಟದಲ್ಲಿ ಬರುವ ಆರು ಅಧ್ಯಾಯಗಳು ಪೂರ್ವೋಕ್ತ ವಿಷಯಗಳನ್ನು ವಿಶೇಷವಾಗಿ ವಿವರಿಸುತ್ತವೆ.
ಮೊದಲನೇಯ ಅಧ್ಯಾಯ ಹಾಗೂ ಎರಡನೇಯ ಅಧ್ಯಾಯದ ಆರಂಭದ ಹತ್ತು ಶ್ಲೋಕಗಳಲ್ಲಿ ಗೀತೋಪದೇಶದ ಪ್ರಸಕ್ತಿ ಇದೆ.
ಧೃತರಾಷ್ಟ್ರ ಉವಾಚ
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ || ||1||
ಭಗವಾನ್ ವೇದವ್ಯಾಸರ ಅನುಗ್ರಹದಿಂದ ಧರ್ಮಭೂಮಿಯಾದ ಕುರುಕ್ಷೇತ್ರದಲ್ಲಿ ನಡೆಯುವ ಯುದ್ಧದ ದೃಶ್ಯಗಳನ್ನು ಹಸ್ತಿನಾವತಿಯಲ್ಲಿಯೇ ಕುಳಿತು ನೇರವಾಗಿ (ಲೈವ್) ಆಗಿ ಕಾಣುತ್ತಿರುವ ಸಂಜಯನಿಗೆ ಧೃತರಾಷ್ಟ್ರನು ರಣರಂಗದಲ್ಲಿ ಕಾದಾಟಕ್ಕಾಗಿ ಸೇರಿದ ನನ್ನ ಮಕ್ಕಳು ಹಾಗೂ ಪಾಂಡವರು ಏನು ಮಾಡಿದರು? ಎಂದು ಪ್ರಶ್ನಿಸಿದನು.
ಮುಂದುವರೆಯುವುದು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.