ನವದೆಹಲಿ: ಭಾರತ ಹಾಗೂ ಶ್ರೀಲಂಕಾ ದೇಶಗಳು ಇಂದು ಪರಸ್ಪರ ಆರ್ಥಿಕ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾದ ರಣೇಲ್ ವಿಕ್ರಮ ಸಿಂಘೆ ಅವರ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಮ್ಮತಿ ನೀಡಲಾಯಿತು. ಇದಕ್ಕೂ ಮೊದಲು ಉಭಯ ನಾಯಕರು ಹೈದರಾಬಾದ್ ಹೌಸ್ನಲ್ಲಿ ಸಭೆ ನಡೆಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಶ್ರೀಲಂಕಾದೊಂದಿಗಿನ ಪರಸ್ಪರ ಸಹಕಾರದ ಒಪ್ಪಂದ ಯಶಸ್ವಿಯಾಗಿದೆ. ಇದು ಉಭಯ ದೇಶಗಳ ನಾಗರಿಕರ ಅಭಿವೃದ್ಧಿಗೂ ಬಲ ನೀಡಲಿದೆ ಎಂದು ತಿಳಿಸಿದ್ದಾರೆ.
Held comprehensive talks with PM Ranil Wickremesinghe on ways to strengthen India-Sri Lanka ties for the benefit of our citizens. @RW_UNP pic.twitter.com/bZrdBIYoge
— Narendra Modi (@narendramodi) April 26, 2017
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಇಂದು ಸಂಜೆ ವಿಕ್ರಮ ಸಿಂಘೆ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಐದು ದಿನಗಳ ಭೇಟಿಗಾಗಿ ವಿಕ್ರಮ ಸಿಂಘೆ ಭಾರತಕ್ಕೆ ಮಂಗಳವಾರ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.