Thursday, May 14th, 2015
News13
ಕಾಸರಗೋಡು : ಯಕ್ಷಗಾನ ಸಾಹಿತ್ಯಕ್ಕೆ ಶಾಲಾ ಪಠ್ಯಪುಸ್ತಕದಲ್ಲಿ ಸೂಕ್ತವಾದ ಸ್ಥಾನವಿದೆ,ಅದನ್ನು ಅರ್ಥೈಸಿಕೊಂಡು ಸ್ವತಃ ಆಸ್ವಾದಿಸಿ ಅಧ್ಯಾಪಕರು ಮಕ್ಕಳ ಮುಂದಿರಿಸಿದಲ್ಲಿ ಇತರ ಕಥೆ, ಕವನ, ಷಟ್ಪದಿ, ಸಾಂಗತ್ಯವೇ ಮೊದಲಾದ ಸಾಹಿತ್ಯ ಪ್ರಕಾರಗಳಂತೆ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವುದರಲ್ಲಿ ಅನುಮಾನವಿಲ್ಲ ಎಂದು ಪ್ರಸಿದ್ದ ಯಕ್ಷಗಾನ ಕಲಾವಿದ, ನಿವೃತ್ತ ಪ್ರಾಧ್ಯಾಪಕ ಶ್ರೀ ರಾಧಾಕೃಷ್ಣ ಕಲ್ಪಾರ್ ಅವರು ಹೇಳಿದರು.
ಕುಂಬಳೆ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಜರಗುತ್ತಿರುವ ಪ್ರೌಢಶಾಲಾ ಕನ್ನಡ ಭಾಷಾ ಅಧ್ಯಾಪಕರ ಸಮಗ್ರ ಪರಿವರ್ತನ ತರಬೇತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದ ಶ್ರೀ ಕಲ್ಚಾರ್ ಅವರು ಯಕ್ಷಗಾನ ಸಾಹಿತ್ಯ. ಪಠ್ಯಪುಸ್ತಕದಲ್ಲಿ ಪ್ರಸ್ತುತವೇ ಎಂಬ ವಿಚಾರವಾಗಿ ವಿಶ್ಲೇಷಣೆ ನಡೆಸಿದರು. ಯಕ್ಷಗಾನ ಸಾಹಿತ್ಯದಲ್ಲಿ ಇತರ ಕವನಗಳ ಸಾಲುಗಳಲ್ಲಿರುವಂತೆಯೇ ವಿಭಿನ್ನ ಆಯಾಮಗಳಿರುವ ಪದಪ್ರಯೋಗಗಳಿರುತ್ತವೆ ಅದರ ವಿಶೇಷತೆಯನ್ನು ಗುರುತಿಸುವ, ಅದಕ್ಕಿಂತಲೂ ಭಿನ್ನವಾದುದನ್ನು ಮಕ್ಕಳು ಗುರುತಿಸುವ ದಾರಿಯನ್ನು ತೋರುವ ಹೊಣೆಗಾರಿಕೆ ಅಧ್ಯಾಪಕರಿಗೆ ಇದೆ, ಆಮೂಲಕ ಯಕ್ಷಗಾನ ಮುಂದಿನ ತಲೆಮಾರಿಗೆ ಪರಿಣಾಮಕಾರಿಯಾಗಿ ವರ್ಗಾವಣೆಯಗುವುದು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೀಯಪದವು ಶ್ರೀವಿದ್ಯಾವರ್ಧಕ ಅನುದಾನಿತ ಹಿರಿಯ ಮಾಧ್ಯಮಿಕ ಶಾಲಾ ಅಧ್ಯಾಪಕ ಶ್ರೀ ರಾಜಾರಾಮ ರಾವ್ ಸ್ವಾಗತಿಸಿ ಮುಳ್ಳೇರಿಯ ಸರಕಾರಿ ಹಿರಿಯ ಮಾಧ್ಯಮಿಕ ಶಾಲಾ ಅಧ್ಯಾಪಕ ಶ್ರೀ ರಾಧಾಕೃಷ್ಣ ಎಂ ಧನ್ಯವಾದವಿತ್ತರು. ಶೇಣಿ ಶ್ರೀ ಶಾರದಾಂಬ ಹಿರಿಯ ಮಾಧ್ಯಮಿಕ ಶಾಲಾ ಅಧ್ಯಾಪಕ ಶ್ರೀ ಚಿದಾನಂದ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಮಾಜದ ಉತ್ತಮ ಸುದ್ದಿಗಳನ್ನು ನಾವು ನಿಮ್ಮ ಮುಂದಿಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಪ್ರೋತ್ಸಾಹಿಸಿ, ಸ್ವೀಕರಿಸಿ. ನೀವು ಸ್ವೀಕರಿಸಿದಾಗ ನಾವು ಬೆಳೆಯಬಹುದು. ಒಳ್ಳೆಯ ಸುದ್ದಿಗಳಿಗೆ ಸಮಾಜ ತೆರೆದುಕೊಂಡಿದೆ ತಲುಪಿಸುವವರು ನಾವಾಗಬಾರದೇಕೆ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.