37 ವರ್ಷಗಳ ಕಾಲ ಸೇನೆಯಲ್ಲಿದ್ದು ದೇಶಸೇವೆ ಮಾಡಿದ ಮೇಜರ್ ಜನರಲ್ ಸೋಮನಾಥ್ ಜಾ ಇದೀಗ ತಮ್ಮ ನಿವೃತ್ತ ಬದುಕನ್ನು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಕಳೆಯುತ್ತಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರು ಕಳೆದ 7 ತಿಂಗಳುಗಳಿಂದ ಸೈಕಲ್ ಮೂಲಕ 29 ರಾಜ್ಯಗಳನ್ನು ಸುತ್ತುವ ಕಾಯಕ ಮಾಡುತ್ತಿದ್ದಾರೆ.
ಅವರ ಫೇಸ್ಬುಕ್ ಪೇಜ್ ‘ಅ ವೆಟರ್ನರ್ಸ್ ಹೋಮೇಜ್ ಜರ್ನಿ’ಯಲ್ಲಿ ಅವರು ನಡೆಸಿದ 12 ಸಾವಿರ ಕಿಲೋಮೀಟರ್ ಜರ್ನಿಯ ಎಲ್ಲಾ ಮಾಹಿತಿಗಳು ಇವೆ. ತನ್ನ ಪ್ರತಿ ಎರಡು ನಿಮಿಷದ ಜರ್ನಿಯನ್ನು ಸ್ವಾತಂತ್ರ್ಯದ ಬಳಿಕ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೂ ಅರ್ಪಿತ ಎನ್ನುತ್ತಾರೆ ಅವರು. ವರದಿಗಳ ಪ್ರಕಾರ ಸ್ವಾತಂತ್ರ ಬಳಿಕ ದೇಶದ ೨೦,೬೦೦ ಸೈನಿಕರು ಹುತಾತ್ಮರಾಗಿದ್ದಾರೆ. ಜಾ ಅವರು 21 ಸಾವಿರ ಸಂಖ್ಯೆಯನ್ನು ಕವರ್ ಮಾಡಲಿದ್ದಾರೆ. ಅವರ ಪತ್ನಿ ಚಿತ್ರ ಅವರ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡುತ್ತಿದ್ದಾರೆ.
‘ನಮ್ಮ ಸೈನಿಕರು ನನಗೆ ಪ್ರೇರಣೆ, ಪ್ರತಿಯೊಬ್ಬ ವ್ಯಕ್ತಿ ನನಗೆ ಪ್ರೇರಣೆ, ನೆಲಕ್ಕುರಳಿದ ಯೋಧ ನನಗೆ ಪ್ರೇರಣೆ. ಅವರು ನನಗಾಗಿ, ನಿಮಗಾಗಿ ಪ್ರಾಣ ಅರ್ಪಿಸಿದರು. ಯಾರಿಗಾಗಿ ನಾವು ಬಲಿದಾನ ಮಾಡಿದೆವು ಎಂಬೂದು ಅವರಿಗೆ ತಿಳಿದಿರಲಿಲ್ಲ. ಅವರು ಪುರಸ್ಕಾರಕ್ಕೆ ಅರ್ಹರು, ಅವರು ಜ್ಞಾಪನೆಗೆ ಅರ್ಹರು, ಅವರಿಗಿಂತ ದೊಡ್ಡ ಪ್ರೇರಣೆ ಮತ್ತೇನು ಬೇಕು?’ ಎಂದು ಜಾ ಪ್ರಶ್ನಿಸುತ್ತಾರೆ.
ಜಾ ಅವರು 8ನೇ ಜಮ್ಮು ಕಾಶ್ಮೀರ ಲೈಟ್ ಇನ್ಫಾಂಟ್ರಿಯ ಭಾಗವಾಗಿದ್ದರು, 2016ರ ಅಕ್ಟೋಬರ್ನಲ್ಲಿ ಅವರು ತಮ್ಮ ಜರ್ನಿಯನ್ನು ತಾವು ನಿವೃತ್ತರಾದ ಸ್ಥಳ ಅಂಬಾಲ ಕಾನ್ಟೊಂಮೆಂಟ್ನಿಂದ ಆರಂಭಿಸಿದರು. 7 ತಿಂಗಳ ತಮ್ಮ ಜರ್ನಿಯಲ್ಲಿ ಅವರು ಸಾವಿರಾರು ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾಋಎ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.