ನವದೆಹಲಿ: ಇನ್ನು ಮುಂದೆ ಆತ್ಮಹತ್ಯಾ ಪ್ರಯತ್ನ ಮಾಡಿ ಸಿಕ್ಕಿ ಬಿದ್ದವರು ಯಾವುದೇ ರೀತಿಯ ಕಾನೂನು ವಿಚಾರಣೆಯ ಸುಳಿಗೆ ಸಿಕ್ಕಿ ಬೀಳುವುದಿಲ್ಲ, ಯಾಕೆಂದರೆ ಆತ್ಮಹತ್ಯಾ ಯತ್ನ ಅಪರಾಧವಲ್ಲ ಎಂದು ಸಾರುವ ಮಸೂದೆಯೊಂದು ಸೋಮವಾರ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ.
ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2016ರನ್ನು ಸೋಮವಾರ ಅನುಮೋದಿಸಲಾಗಿದೆ, ಈ ಮಸೂದೆ 2016ರ ಆಗಸ್ಟ್ನಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತ್ತು.
ಸರ್ಕಾರ ಮತ್ತು ಸರ್ಕಾರದ ಅನುದಾನದಿಂದ ಸೇವೆ ಸಲ್ಲಿಸುತ್ತಿರುವ ಮಾನಸಿಕ ಆರೊಗ್ಯ ಕೇಂದ್ರಗ ಚಿಕಿತ್ಸೆ ಮತ್ತು ಕಾಳಜಿ ಪ್ರತಿ ಮಾನಸಿಕ ಪೀಡಿತ ವ್ಯಕ್ತಿಗೂ ತಲುಪಬೇಕು ಎಂಬುದನ್ನು ಈ ಸಮೂದೆ ದೃಢಪಡಿಸಲಿದೆ.
ಬಿಪಿಎಲ್ ಕಾಡ್ ಹೊಂದಿದ್ದಾರೆಯೇ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರತಿ ಬಡ, ವಸತಿ ರಹಿತ ವ್ಯಕ್ತಿಗೆ ಉಚಿತ ಚಿಕಿತ್ಸೆಯನ್ನು ನೀಡಬೇಕು ಎಂಬುದನ್ನು ಈ ಮಸೂದೆ ತಿಳಿಸುತ್ತದೆ.
ಮುಖ್ಯವಾಗಿ ಈ ಮಸೂದೆ ಆತ್ಮಹತ್ಯಾ ಪ್ರಯತ್ನವನ್ನು ಅಪರಾಧವಲ್ಲ ಎಂದು ಸಾರಿದ್ದು, ಸಾಯಲು ಪ್ರಯತ್ನಿಸಿದವರಿಗೆ ಶಿಕ್ಷೆಯನ್ನು ರದ್ದುಗೊಳಿಸಿದೆ. ಅಲ್ಲದೇ ಅವರು ತೀವ್ರ ತರನಾದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಪರಿಗಣಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.