ವಾಷಿಂಗ್ಟನ್: ಅಮೇರಿಕಾ ಸರ್ಕಾರ ತಾತ್ಕಾಲಿಕವಾಗಿ 8 ರಾಷ್ಟ್ರಗಳಿಂದ ಹೊರಡುವ ವಿಮಾನಗಳಲ್ಲಿ ಪ್ರಯಾಣಿಕರು ಕ್ಯಾರಿ- ಆನ್- ಲಗೇಜ್ ಜೊತೆ ಲ್ಯಾಪ್ಟಾಪ್, ಐಪ್ಯಾಡ್, ಕ್ಯಾಮೆರಾ ಮತ್ತಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿರ್ಬಂಧಿಸಿದೆ. ಇದು ಮಂಗಳವಾರದಿಂದ ಅನ್ವಯವಾಗಲಿದೆ.
ಈ ನಿಷೇಧಕ್ಕೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಈ ಬಗ್ಗೆ ರಾಯಲ್ ಜೋರ್ಡನ್ ಏರ್ಲೈನ್ಸ್ ಮತ್ತು ಸೌದಿ ಅರೇಬಿಯಾದ ಅಧಿಕೃತ ಸುದ್ದಿ ಸಂಸ್ಥೆ ಬಹಿರಂಗಪಡಿಸಿದೆ.
ಈಜಿಪ್ಟ್, ಜಾರ್ಡನ್, ಕುವೈಟ್, ಮೊರೊಕ್ಕೋ, ಕತಾರ್, ಸೌದಿ ಅರೇಬಿಯಾದ ರಿಯಾದ್ ಮತ್ತು ಜೆಡ್ಡಾಹ್, ತರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ (2) ಈ 10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಬರುವ ನೇರ ವಿಮಾನಗಳಿಗೆ ಇದು ಅನ್ವಯವಾಗಲಿದೆ ಎಂದು ಅಮೇರಿಕಾದ ಮೂಲಗಳು ತಿಳಿಸಿವೆ.
ಗುಪ್ತಚರ ಇಲಾಖೆ ಸಂಭನೀಯ ದಾಳಿಯ ಬಗ್ಗೆ ಸೂಚಿಸಿದ್ದು, ಭದ್ರತಾ ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರ್ಯಾಂಡ್ ಕಾರ್ಪೋರೇಶನ್ನ ವಾಯುಯಾನ ಭದ್ರತಾ ತಜ್ಞ ಬ್ರಿಯಾನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.