ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶೀಘ್ರದಲ್ಲೇ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳೊಂದಿಗೆ ರೂ.10 ಮುಖಬೆಲೆಯ ನೋಟುಗಳನ್ನು ಹೊರಡಿಸಲಿದೆ.
ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್ರ ಸಹಿ ಹೊಂದಲಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಮುದ್ರಣದ ವರ್ಷ ನೋಟಿನ ಹಿಂಭಾಗದಲ್ಲಿ ಇರಲಿದೆ. ಇತರ ವೈಶಿಷ್ಟ್ಯಗಳ ಪೈಕಿ ಎರಡು ಬದಿಗಳಲ್ಲಿ ಅಂಕಿಗಳು ಆರೋಹಣ (Ascending ) ಗಾತ್ರದಲ್ಲಿ ಇರಲಿವೆ. ಮೊದಲ ಮೂರು ಆಲ್ಫಾ-ನ್ಯೂಮರಿಕಲ್ ಅಕ್ಷರಗಳ ಗಾತ್ರ ಸ್ಥಿರವಾಗಿರಲಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ರೂ.10 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರಲಿವೆ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.