ನವದೆಹಲಿ: ಡಿಜಿಟಲ್ ಪ್ರದರ್ಶನಕ್ಕಾಗಿ ಏನನ್ನಾದರು ಮಾಡುವ ಸಲುವಾಗಿ ಸಂಸ್ಕೃತವನ್ನು ಜಾಗತಿಕವಾಗಿ ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.
111 ವರ್ಷ ಇತಿಹಾಸವುಳ್ಳ ಮದ್ರಾಸ್ ಸಂಸ್ಕೃತ ಕಾಲೇಜಿನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಸ್ಕೃತ ಸರಳ ಮತ್ತು ವರ್ಸಟೆಲ್ ಭಾಷೆಯಾಗಿದ್ದು, ಹೀಗಾಗಿ ಅದನ್ನು ಭಾಷೆಗಳ ಡಿಜಿಟಲ್ ಪರ್ಫಾಮೆನ್ಸ್ಗಾಗಿ ಜಾಗತಿಕವಾಗಿ ಸ್ವೀಕರಿಸಲಾಗಿದೆ’ ಎಂದಿದ್ದಾರೆ.
ಈ ಡಿಜಿಟಲ್ ಯುಗದಲ್ಲೂ ಸಂಸ್ಕೃತ ತನ್ನ ವರ್ಸಟೆಲ್ ಮತ್ತು ಸರಳತೆಯಿಂದಾಗಿ ಎಲ್ಲರ ಗಮನ ಸೆಳೆದಿದೆ. ಹೀಗಾಗಿಯೇ ಅದನ್ನು ಭಾಷೆಗಳ ಡಿಜಿಟಲ್ ಪರ್ಫಾಮೆನ್ಸ್ಗಾಗಿ ಜಾಗತಿಕವಾಗಿ ಒಪ್ಪಿಕೊಳ್ಳಲಾಗಿದೆ. ಇತರ ಯಾವುದೇ ಭಾರತೀಯ ಅಥವಾ ಯುರೋಪಿಯನ್ ಭಾಷೆಗಳಿಗೆ ಡಿಜಿಟಲ್ ಡಿಮ್ಯಾಂಡ್ನ ಲ್ಯಾಂಗ್ವೆಜ್ ಬ್ಲೆಂಡ್ ಸವಾಲನ್ನು ಎದುರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಪ್ರಾಚೀನ ಭಾಷೆಯಾದ ಸಂಸ್ಕೃತ ತಂತ್ರಜ್ಞಾನವನ್ನು ಅತಿ ವೇಗದಲ್ಲಿ ಸ್ವೀಕಾರ ಮಾಡಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.