ನವದೆಹಲಿ: ಒಂದೇ ಬಗೆಯ ಉತ್ಪನ್ನಗಳನ್ನು ಒಂದೊಂದು ಸ್ಥಳಗಳಲ್ಲಿ ಒಂದೊಂದು ದರಗಳಿಗೆ ಮಾರಾಟ ಮಾಡುವುದು ನಮ್ಮ ದೇಶದಲ್ಲಿ ಸಾಮಾನ್ಯ. ಒಂದೇ ಬಗೆಯ ಉತ್ಪನ್ನಗಳಿಗೆ ರಸ್ತೆ ಬದಿ ಅಂಗಡಿಯಲ್ಲಿ ಒಂದು ದರವಾದರೆ ಸಿನಿಮಾ ಹಾಲ್,ಏರ್ಪೋರ್ಟ್ಗಳಲ್ಲಿ ಇನ್ನೊಂದು ದರವಿರುತ್ತದೆ. ಆದರೂ ಈ ಬಗ್ಗೆ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ.
ರೈಲ್ವೇ ನಿಲ್ದಾಣ, ಬಸ್ ಸ್ಟ್ಯಾಂಡ್ ಮುಂತಾದ ಹಲವು ಕಡೆಗಳಲ್ಲಿ ಅಂಗಡಿ ಮಾಲೀಕರು ಉತ್ಪನ್ನಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಆದರೂ ಇವರ ವಿರುದ್ಧ ಯಾವುದೇ ಕ್ರಮಕೈಕೊಳ್ಳಲಾಗುತ್ತಿಲ್ಲ.
ಆದರೆ ಇದೀಗ ನೀರಿನ ಬಾಟಲಿಯನ್ನು ಏರ್ಪೋರ್ಟ್, ಸಿನಿಮಾ ಹಾಲ್ಗಳಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತಿಲ್ಲ, ಹಾಗೊಂದು ವೇಳೆ ಮಾರಾಟ ಮಾಡಿದರೆ ದಂಡ ತೆರಬೇಕಾಗುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
ರೈಲ್ವೇ ಸ್ಟೇಶನ್ ಆಗಲಿ ಏರ್ಪೋರ್ಟ್ ಆಗಲಿ ಎಂಆರ್ಪಿ ದರದಲ್ಲೇ ಕಂಪನಿಗಳು ನೀರಿನ ಬಾಟಲಿಯನ್ನು ಮಾರಾಟ ಮಾಡಬೇಕು ಎಂದು ಆದೇಶಿಸಿದ್ದಾರೆ.
ಈ ಬಗ್ಗೆ ಹಲವಾರು ದೂರುಗಳು ದಾಖಲಾದ ಹಾಗೂ ಕಂಪನಿಯೊಂದು ಹೆಚ್ಚಿನ ದರಕ್ಕೆ ನೀರಿನ ಬಾಟಲಿಯನ್ನು ಮಾರುವುದು ಸ್ಪಷ್ಟವಾದ ಹಿನ್ನಲೆಯಲ್ಲಿ ಸಚಿವರು ಈ ಆದೇಶ ಹೊರಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.