ನವದೆಹಲಿ: ವಿವಾದಾತ್ಮಕ ಮುಸ್ಲಿಂ ವಿದ್ವಾಂಸಕ ಝಾಕೀರ್ ನಾಯ್ಕ್ಗೆ ರಾಷ್ಟ್ರೀಯ ತನಿಖಾ ದಳ ನೋಟಿಸ್ ಜಾರಿಗೊಳಿಸಿದ್ದು, ಮಾ.14ರಂದು ತನ್ನ ಕೇಂದ್ರ ಕಛೇರಿಗೆ ಆಗಮಿಸಿ ವಿಚಾರಣೆಗೆ ಒಳಪಡಬೇಕು ಎಂದು ಆಗ್ರಹಿಸಿದೆ.
ಕಳೆದ ವರ್ಷ ಢಾಕಾದಲ್ಲಿ ನಡೆದ ಭಯೋತ್ಪಾದನ ದಾಳಿಗೆ ಸಂಬಂಧಿಸಿದಂತೆ ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿರುವ ಝಾಕೀರ್ ನಾಯ್ಕ್ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ಇದ್ದಾನೆ ಎನ್ನಲಾಗಿದೆ. ನಾಯ್ಕ್ ಪ್ರವಚನದಿಂದ ಪ್ರಚೋದನೆಗೊಂಡು ನಾವು ಬಾಂಬ್ ಸ್ಫೋಟಿಸಿದ್ದಾಗಿ ಢಾಕ್ ದಾಳಿಕೋರರು ತಪ್ಪೊಪ್ಪಿಕೊಂಡಿದ್ದರು.
ಮೂಲಗಳ ಪ್ರಕಾರ ಮಂಗಳವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಕ್ನ ಸಹೋದರಿಯರನ್ನು ವಿಚಾರಣೆ ನಡೆಸಿದ್ದರು.
ನಾಯ್ಕ್ನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ನನ್ನು ಉಗ್ರ ಚಟುವಟಿಕೆಗಳ ಆರೋಪದ ಮೇರೆಗೆ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿದೆ.
ಭಾರತದಲ್ಲಿ ಸನ್ನಿವೇಶಗಳು ಸಂಪೂರ್ಣ ನನ್ನ ವಿರುದ್ಧವಾಗಿದೆ, ಹೀಗಾಗಿ ಅಲ್ಲಿ ನ್ಯಾಯಯುತ ತನಿಖೆ ನಡೆಯುತ್ತದೆ ಎಂಬ ನಂಬಿಕೆ ನನಗೆ ಇಲ್ಲ ಎಂದು ನಾಯ್ಕ್ ಹೇಳಿಕೆ ನೀಡಿದ್ದಾನೆ. ಅಲ್ಲದೇ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಕೆಲ ತಿಂಗಳುಗಳ ಕಾಲವಕಾಶ ಕೋರಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.