ರಾಯ್ಪುರ: ತನ್ನ ರಾಜ್ಯದ ಬಡವರಿಗೆ ಉಚಿತವಾಗಿ 45 ಲಕ್ಷ ಸ್ಮಾರ್ಟ್ ಫೋನ್ಗಳನ್ನು ಹಂಚಲು ಛತ್ತೀಸ್ಗಢ ಸರ್ಕಾರ ನಿರ್ಧರಿಸಿದೆ. ಸೋಮವಾರ ಮಂಡಿಸಲಾದ ರಾಜ್ಯ ಬಜೆಟ್ನಲ್ಲಿ ಸಿಎಂ ರಮಣ್ ಸಿಂಗ್ ಈ ಬಗ್ಗೆ ತಿಳಿಸಿದ್ದಾರೆ.
2017-18ರ ಸಾಲಿಗೆ ಒಟ್ಟು 73,032 ಕೋಟಿ ಮೊತ್ತದ ರಾಜ್ಯ ಬಜೆಟ್ನ್ನು ರಮಣ್ ಸಿಂಗ್ ಅವರು ಮಂಡಿಸಿದ್ದಾರೆ, ಬಜೆಟ್ ಮೊತ್ತ ಕಳೆದ ವರ್ಷಕ್ಕಿಂತ ಈ ಬಾರಿ ಶೇ.7.6ರಷ್ಟು ಹೆಚ್ಚಾಗಿದೆ.
ರಾಜ್ಯದ ‘ಸೂಚನಾ ಕ್ರಾಂತಿ ಯೋಜನೆ’ಯ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ಬಡವರಿಗೆ ಮತ್ತು ವಿಶ್ವವಿದ್ಯಾನಿಲಯದ ಬಡ ವಿದ್ಯಾರ್ಥಿಗಳಿಗೆ ಸಿಮ್ ಮತ್ತು 45 ಲಕ್ಷ ಸ್ಮಾರ್ಟ್ಫೋನ್ಗಳನ್ನು ವಿತರಿಸಲಿದ್ದೇವೆ ಎಂದು ಬಜೆಟ್ ವೇಳೆ ಸಿಎಂ ಘೋಷಣೆ ಮಾಡಿದ್ದಾರೆ.
ನಕ್ಸಲ್ ಪೀಡಿತ ರಾಜ್ಯವಾಗಿರುವ ಛತ್ತೀಸ್ಗಢದಲ್ಲಿ ಮೊಬೈಲ್ ನೆಟ್ವರ್ಕ್ ಉತ್ತಮವಾಗಿಲ್ಲ, ಹೀಗಾಗೀ ಸ್ಮಾರ್ಟ್ಫೋನ್ ವಿತರಣಾ ಯೋಜನೆ ಎಷ್ಟು ಪ್ರಯೋಜನಕಾರಿಯಾಗಲಿದೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾಣಬಹುದಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.