ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಭಾರತದ ಸಮಗ್ರತೆ, ಏಕತೆಗೆ ಧಕ್ಕೆ ತರುತ್ತಿರುವ ಜೆಎನ್ಯುಗೆ ನನ್ನ ತೆರಿಗೆ ಹಣ ಸಲ್ಲಿಸಲು ನನಗಿಷ್ಟವಿಲ್ಲ. “Breaking of Bharat” ಗೆ ನಾನು ಬೆಂಬಲಿಸುವುದಿಲ್ಲ ಎಂದು ಚಂದನ್ ಕುಮಾರ್ ಎಂಬುವರು ಭಾರತ ಸರ್ಕಾರದ ಪ್ರಧಾನಿ ಸಚಿವಾಲಯಕ್ಕೆ ಪಿಟಿಷನ್ ಸಲ್ಲಿಸಿದ್ದಾರೆ.
ಕಾಲೇಜು ಅಂಗಳದಲ್ಲಿ ವೈಚಾರಿಕತೆಯಲ್ಲಿ ವಿಭಿನ್ನತೆ ಇರಲಿ, ಆದರೆ ಅದು ಭಾರತವನ್ನು ಇಬ್ಭಾಗಿಸುವುದಕ್ಕೆ ಪ್ರೇರೇಪಿಸಕೂಡದು. ಆದರೂ ಅವರು ತಮ್ಮ ನಡೆಯೇ ಸರಿ ಎಂದು ಸಮರ್ಥಿಸಿಕೊಂಡರೆ ಅಭ್ಯಂತರವಿಲ್ಲ, ಆದರೆ ಅಂಥ ವಿವಿಗೆ ನನ್ನ ತೆರಿಗೆಯ ಹಣ ಕೊಡಲು ನಾನು ಸಿದ್ಧನಿಲ್ಲ. ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಘೋಷಿತ ಉದಾರವಾದಿ ಶಿಕ್ಷಕರು ಕೆಲಸ ಮಾಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸಲಿ ಎಂದಿದ್ದಾರೆ.
ದಯವಿಟ್ಟು ಜೆಎನ್ಯು ಹಾಗೂ ಅದೇ ಧಾಟಿಯಲ್ಲಿ ನಡೆಯುತ್ತಿರುವ ಇತರ ವಿಶ್ವವಿದ್ಯಾಲಯಗಳಿಗೆ ನೀಡುತ್ತಿರುವ ಆರ್ಥಿಕ ಸಹಾಯ ನಿಲ್ಲಿಸಿ. ಅದೇ ಹಣವನ್ನು ಶಿಕ್ಷಣ ವಂಚಿತ ಲಕ್ಷಾಂತರ ಮಕ್ಕಳ ಅಭ್ಯುದಯಕ್ಕೆ ನೀಡಿ ಎಂದು ಚಂದನ್ಕುಮಾರ್ ವಿನಂತಿಸಿದ್ದಾರೆ.
48,264 ಜನ ಈಗಾಗಲೇ ಚಂದನ್ಕುಮಾರ್ ಅವರ ಪಿಟಿಷನ್ ಬೆಂಬಲಿಸಿದ್ದಾರೆ. ದೆಹಲಿ ರಾಮ್ಜಾಸ್ ಕಾಲೇಜು ಹಾಗೂ ಜೆಎನ್ಯುನಲ್ಲಿ ನಡೆಯುತ್ತಿರುವ ರಾಷ್ಟ್ರವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಈ ಪಿಟಿಷನ್ ಸಲ್ಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.