ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಪೂರಕವಾಗಿ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯ ನೇತೃತ್ವದಲ್ಲಿ ಪ್ರಥಮ ಹಂತದಲ್ಲಿ ದಕ್ಷಿಣ ಭಾರತದ 6ರಾಜ್ಯಗಳ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಜ.30,31ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜ.30,31ರಂದು ನಡೆಯಲಿದೆ.
ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸಲಿದ್ದು. ಇದರಲ್ಲಿ ಆಯ್ಕೆಯಾದ ಕ್ರೀಡಾಳುಗಳನ್ನು ರಾಷ್ಟಮಟ್ಟಕ್ಕೆ ಆಯ್ಕೆಗೆ ಅರ್ಹರಾಗುತ್ತಾರೆ. ರಾಷ್ಟ್ರಮಟ್ಟದಿಂದ 2020 ಮತ್ತು 2024ರ ಓಲಂಪಿಕ್ಸ್ ಆಯ್ಕೆ ಮಾಡಲಾಗುವುದು. ಸಂಪೂರ್ಣವಾಗಿ ಪಾರದರ್ಶಕತೆ ಹಾಗೂ ಉಚಿತ ಆಯ್ಕೆಯಾಗಿರುತ್ತದೆ. ಯಾವುದೇ ಖರ್ಚಿಯಿಲ್ಲದೆ ಓಲಂಪಿಕ್ಸ್ ಆಯ್ಕೆಯಾಗಿ ಮುಂದಿನ 4 ರಿಂದ 8 ವರ್ಷ ದೇಶ ವಿದೇಶಗಳಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಗೋಸ್ಕರ ಸುಮಾರು 1000 ಜನರಿಗೆ ವಸತಿ ಹಾಗೂ ವಾಹನ ಹಾಗೂ ಇತರೆ ವ್ಯವಸ್ಥೆಗಳಿಗೆ ತಯಾರಿ ಮಾಡಲಾಗಿದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಲಲಾಗಿದೆ. ಆಂದ್ರ ಪ್ರದೇಶ, ತೆಲಂಗಾಣ, ಗೋವಾ, ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ 800ಕ್ಕೂ ಅಧಿಕ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿರುವ ಪ್ರತಿನಿಧಿಗಳು ಮೂಡಾಬಿದಿರೆಗೆ ಆಗಮಿಸಲಿದ್ದಾರೆ.
ಪಿ.ಟಿ. ಉಷಾರಿಂದ ಉದ್ಘಾಟನೆ:
ಜನವರಿ 30 ರಂದು ಸಾಯಂಕಾಲ 4.30ಕ್ಕೆ ಸ್ವರಾಜ ಮೈದಾನದಲ್ಲಿ ಆಕರ್ಷಕ ಪಥ ಸಂಚಲನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಶನಲ್ ಯುವ ಕೊ-ಓಪರೆಟಿವ್ ಅದ್ಯಕ್ಷ ರಾಜೇಶ್ ಪಾಂಡೆ ವಹಿಸಿಕೊಳ್ಳಲಿದ್ದಾರೆ. ಆಯ್ಕೆ ಶಿಬಿರವನ್ನು ಜ.30ರಂದು ವೇಗದ ಓಟಗಾರ್ತಿ ಪಿ.ಟಿ. ಉಷಾ ನೇರವೆರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಪ್ರತಿಷ್ಠಾನದ ಅದ್ಯಕ್ಷ ಡಾ. ಮೋಹನ್ ಆಳ್ವ ,ಗೆಲ್ ಇಂಡಿಯನ್ ಸ್ವೀಡ್ ಸ್ವಾರ್ನ ರಾಷ್ಟ್ರೀಯ ಸಂಚಾಲಕ ವಿ. ಮುರಳಿದರನ್, ವಿಧಾನ ಪರಿಷತ್ನ ಮುಖ್ಯ ಸಚೇತಕ ಕ್ಯಾಪ್ಟ್ನ್ ಗಣೇಶ್ ಕಾರ್ಣಿಕ್, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಅಮರನಾಥ ಶೆಟ್ಟಿ, ರಾಜರಾಜೇಶ್ವರಿ ಇನ್ಫ್ರಾಟೆಕ್ ಆಡಳಿತ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಭಾರತದ ರಾಜ್ಯಗಳ ಸಂಚಾಲಕರು ಉಪಸ್ಥಿತರಿರುವರು.
ಕಾರ್ಯಕ್ರಮ ನಡೆಯಲಿದೆ. ಆಯ್ಕೆ ಪ್ರಕ್ರೀಯೇಯ ಜನವರಿ 31ರಂದು ಬೆಳಿಗ್ಗೆ 7.30 ರಿಂದ ಸ್ವರಾಜ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಆಯ್ಕೆಯಾದವರಿಗೆ 03 ಫೆಬ್ರವರಿ 2017 ರ ನಂತರ ದೆಹಲಿಯ ಜವಾಹರಲಾಲ್ ಮೈದಾನದಲ್ಲಿ ಆಯ್ಕೆ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.