ಅವರಿಗೆ ಕೆಂಪು ಬಣ್ಣದ ಬಾವುಟಗಳಷ್ಟೇ ಇಷ್ಟವಾಗುವುದಿಲ್ಲ. ಅಮಾಯಕರ ಕೆಂಪು ರಕ್ತವೂ ಬೇಕು. ಅವರು ಅಕ್ಷರಶಃ ರಕ್ತಪಿಪಾಸುಗಳು. ಸದಾ ಹಸಿರನ್ನೇ ಹೊದ್ದು ಶಾಂತಿಯ ದ್ಯೋತಕವಾಗಿರಬೇಕಾದ ದೇವರ ನಾಡಲ್ಲಿ ರಾಕ್ಷಸರೇ ತುಂಬಿಕೊಂಡಿದ್ದಾರೆ. ಅದರಲ್ಲೂ ಹಿಂದೂಗಳ ನೆತ್ತರೆಂದರೆ ಬಲು ಪ್ರೀತಿ. ಅಬ್ಬಾ..! ನಿಜಕ್ಕೂ ಅಪಾಯಕಾರಿ.
ಕಣ್ಣೂರು ಒಂದರಲ್ಲೇ ಕಳೆದ 8 ತಿಂಗಳಲ್ಲಿ 20ಕ್ಕೂ ಹೆಚ್ಚು ಜನ ಬಿಜೆಪಿ ಕಾರ್ಯಕರ್ತರೂ ಹಾಗೂ ಮುಖಂಡರನ್ನು ಹತ್ಯೆಗೈದ ಕೆಂಪು ಉಗ್ರರು, ಕೇರಳದ ವಿವಿಧ ಭಾಗಗಳಲ್ಲಿ ಅನೇಕ ಗಲಭೆ, ಹಲ್ಲೆಗಳಿಗೆ ಕಾರಣರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮತ್ತೆ ಬಿಜೆಪಿ ಕಾರ್ಯಕರ್ತನೊಬ್ಬರನ್ನು ಕೊಂದಿದ್ದು, ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ಕೂಡಾ ಎಸೆದಿದ್ದಾರೆ.
ಕೇರಳದ ರಕ್ತಸಿಕ್ತ ಅಧ್ಯಾಯ ಇಂದಿನದಲ್ಲ. ತಮ್ಮ ವಿಚಾರಗಳಿಗೆ ಒಪ್ಪುವವರು ದೊರಕದಿದ್ದಲ್ಲಿ, ಮಚ್ಚು ಲಾಂಗುಗಳನ್ನು ಹಿಡಿದು ಹೊರಡುವುದನ್ನೇ ದಶಕಗಳಿಂದ ರೂಢಿ ಮಾಡಿಕೊಂಡಿದ್ದಾರೆ ಕೆಂಪುಗ್ರರು.
1943 ರಲ್ಲಿ ಸಂಘದ ಮೊದಲ ಶಾಖೆ ಕಣ್ಣೂರಿನಲ್ಲಿ ಆರಂಭವಾಯಿತು. ಆಗ ಅನೇಕ ಕಮ್ಯುನಿಷ್ಟರು ಸಂಘದ ಆದರ್ಶಗಳತ್ತ ಆಕರ್ಷಿತರಾದ ಪರಿಣಾಮವೇ ರಕ್ತ ಚರಿತೆಗೆ ಮೂಲ ಕಾರಣ.
ವಡಿಕ್ಕಲ್ ರಾಮಕೃಷ್ಣನ್ ಅವರನ್ನು ಕೆಂಪುಗ್ರರು ಕೊಲೆಗೈದರು. ಆಗ ಇದಕ್ಕೆ ಬೆಂಬಲವಾಗಿ ನಿಂತವರೇ ಇಂದಿನ ಕೇರಳ ಮುಖ್ಯಮಂತ್ರಿ ಪಿ.ವಿಜಯನ್. ಕರೀಂಬಿಲ್ ಸತೀಶನ್ ಎಂಬ ಸ್ವಯಂ ಸೇವಕನನ್ನು ಕಮ್ಯುನಿಷ್ಟ್ ಬಾಲಕೃಷ್ಣ ಹತ್ಯೆಗೈದಿದ್ದ. ಇಂದಿಗೂ ಈ ರಕ್ತ ಚರಿತೆಗೆ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ.
ಕಳೆದ ಶತಮಾನದ ಕೊನೆಯ ತಿಂಗಳಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಉಪಾಧ್ಯಕ್ಷರಾಗಿದ್ದ ಜಯಕೃಷ್ಣನ್ ಮಾಸ್ಟರ್ ಶಾಲೆಯಲ್ಲಿ ಪಾಠ ಮಾಡುತ್ತಿರುವಾಗ ಕಮ್ಯುನಿಸ್ಟ್ರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಇರಿದು ಹೋದರು.
ರಕ್ತದೊಂದಿಗೆ ಆಟವಾಡುವುದು ಅವರಿಗೆ ಸಲೀಸಾಗಿಬಿಟ್ಟಿದೆ. ಅದಕ್ಕೆ ಯಾವುದೇ ಸಮಯ, ಕಾರಣಗಳ ಹಂಗೇ ಇಲ್ಲ. ತಮಗೆ ಅಡ್ಡಿಯಾದವರನ್ನು ಮನಬಂದಂತೆ ಓಡಾಡಿಸಿ ಜೀವತೆಗೆಯುವಲ್ಲಿ ಅವರು ನಿಪುಣರು.
ಕಣ್ಣೂರಿನಲ್ಲಾಗುತ್ತಿರುವ ಹಿಂದುಗಳ ಕೊಲೆ ಗಮನಿಸಿದರೆ ಅದೊಂದು ವಧಾಕ್ಷೇತ್ರವೇ ಆಗಿಹೋಗಿದೆ. ಮಲಬಾರ್ ಪ್ರದೇಶಗಳಲ್ಲೂ ರಾಜಕೀಯ ಕೊಲೆಗಳೇನು ಕಡಿಮೆಯಾಗಿಲ್ಲ. ಇಂದಿನ ಮುಖ್ಯಮಂತ್ರಿ ಪಿ.ವಿಜಯನ್ ಒಮ್ಮೆ, ನಾವು ವಿರೋಧಿಗಳನ್ನು ಹೇಗಿ ಕೊಲ್ಲಬೇಕು ಎಂದು ಬಂಗಾಳಿಗಳಿಂದ ಕಲಿಯಬೇಕು. ಅವರು ಒಂದಿನಿತೂ ರಕ್ತ ಸಿಗದ ಹಾಗೇ ಮುಗಿಸುತ್ತಾರೆ ಎಂದಿದ್ದರಂತೆ.
ಇದೇ ಜ.6 ರಂದು ಸಿಪಿಐ ಎಂ ಕಾರ್ಯಕರ್ತರು ಬಿಜೆಪಿಯ ರಾಧಾಕೃಷ್ಣನ್ ಅವರ ಮನೆಗೆ ಬೆಂಕಿ ಇಡುತ್ತಾರೆ. ಅವರ ಪತ್ನಿ ಹಾಗೂ ಸಹೋದರ ಕೂಡ ಈ ಘಟನೆಯಲ್ಲಿ ಗಾಯಗೊಳ್ಳುತ್ತಾರೆ. ಬೆಂಕಿ ಇಟ್ಟವರನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಸಿಪಿಐ ಎಂ ನ ಕಾರ್ಯಕರ್ತರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.
ಎಡಪಕ್ಷಗಳು ಅಧಿಕಾರದಲ್ಲಿದ್ದಾಗ ರಾಜಕೀಯ ಹತ್ಯೆಗಳು ನಿಶ್ಚಿತವಾಗಿಬಿಟ್ಟಿವೆ. ಪ.ಬಂಗಾಲವೂ ಇದಕ್ಕೆ ಹೊರತಿಲ್ಲ. ಬಹುಶಃ ಆರ್ಎಸ್ಎಸ್ ಹಾಗೂ ಬಿಜೆಪಿಗೆ ಸಂಘಟಿತರಾಗಿ ಇದಕ್ಕೊಂದು ಶಾಶ್ವತ ಪರಿಹಾರ ನೀಡುವ ಸಮಯ ಬಂದಿದೆ. ಕಳೆದ ವಾರವಷ್ಟೇ ಕರ್ನಾಟಕದ ದ.ಕ.ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ, ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾದರೆ ಕೇಂದ್ರದ ಶಕ್ತಿ ತೋರಿಸಬೇಕಾಗುತ್ತದೆ ಎಂದು ಕಮ್ಯುನಿಸ್ಟ್ರಿಗೆ ಎಚ್ಚರಿಕೆ ನೀಡಿದ್ದರು. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮನಸ್ಸು ಮಾಡಬೇಕು. ಇಲ್ಲದಿದ್ದಲ್ಲಿ ದೇವರ ನಾಡು ಕೆಂಪು ಉಗ್ರರ ರಕ್ತದೋಕುಳಿಯಲ್ಲಿ ಮೀಯಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.