ಕೊಟ್ಟಾಯಂ: ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಹಲ್ಲೆ ಮುಂದುವರಿಸಿದ್ದೇ ಆದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್(ದ.ಕ ಜಿಲ್ಲೆ) ಸಿಪಿಐ-ಎಂಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೇರಳ ರಾಜ್ಯದ ಬಿಜೆಪಿ ಕಮೀಟಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ತಮ್ಮ ಕೃತ್ಯವನ್ನು ಮುಂದುವರಿಸಿದ್ದೇ ಆದಲ್ಲಿ, ದೇಶದ ಅನ್ಯ ಭಾಗಗಳಲ್ಲಿರುವ ಬಿಜೆಪಿಯ ಶಕ್ತಿ ಏನೆಂದು ಸಿಪಿಐ-ಎಂ ಗೆ ಗೊತ್ತಾಗಲಿದೆ ಎಂದರು.
ದೇಶದ ಉಳಿದೆಲ್ಲ ರಾಜ್ಯಗಳು ಅಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಯಿಂದ ಗುರುತಿಸಿಕೊಂಡರೆ, ಸಿಪಿಐ-ಎಂ ಆಡಳಿತವಿರುವ ರಾಜ್ಯ, ರಾಜಕೀಯ ಹತ್ಯೆಗಳಿಂದ ಪ್ರಚಾರ ಪಡೆಯುತ್ತಿದೆ ಎಂದೂ ಸಂಸದ ಕಟೀಲ್ ಆರೋಪಿಸಿದರು.
ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಸಹಿಸಲಾಗದೇ ಈ ರೀತಿ ಆಕ್ರಮಣ ನಡೆಯುತ್ತಿದೆ ಎಂದರು.
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರಾದ ಓ ರಾಜಗೋಪಾಲ, ಕೆ.ವಿ.ಶ್ರೀಧರನ್ ಮಾಸ್ಟರ್, ಸಿ.ಕೆ.ಪದ್ಮನಾಭನ್, ಪಿ.ಎಸ್.ಶ್ರೀಧರನ್ ಪಿಳ್ಳೈ, ಪಿ.ಕೆ.ಕೃಷ್ಣದಾಸ ಮತ್ತು ಮುರಳೀಧರನ್ ಸಭೆಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.