ಅಹಮದಾಬಾದ್: ಗುಜರಾತಿನ ಅಹಮದಾಬಾದ್ನ ಸಾಬರಮತಿ ನದಿ ದಡದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮುಖ್ಯಮಂತ್ರಿ ವಿಜಯ ರುಪಾನಿ ಉದ್ಘಾಟಿಸಿದರು.
ಸಮಾರಂಭದ ಉದ್ಘಾಟನಾ ಸಮಯದಲ್ಲಿ ಪುರಸಭೆ ಶಾಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಪ್ರದರ್ಶಿಸಿದರು.
ಈ ಕಾರ್ಯಕ್ರಮದ ಥೀಮ್ ’ಗುಜರಾತನ ಪ್ರವಾಸಿ ತಾಣಗಳು’ ಎಂಬ ಶೀರ್ಷಿಕೆಯಡಿಯಲ್ಲಿ, ಗಾಳಿಪಟ ಕಾರ್ಯಾಗಾರ, ಮಕ್ಕಳ ಸಾಹಸಿ ಆಟಗಳು, ಕ್ರಾಫ್ಟ್ ಮಳಿಗೆಗಳು, ಸ್ಥಳೀಯ ಕಲೆ ಮತ್ತು ಭಕ್ಷ್ಯಗಳನ್ನು ಪ್ರದರ್ಶಿಸುವ ಆಹಾರ ಮಳಿಗಳು ಈ ವರ್ಷದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಪ್ರಮುಖ ಆಕರ್ಷಣೆ ಕೇಂದ್ರಗಳಾಗಿವೆ.
ಉತ್ಸವವನ್ನು ವಿಕ್ಷೀಸಲು ಬರುವ ಮಕ್ಕಳಿಗೆ ವಿವಿಧ ಆಕಾರ ಮತ್ತು ಬೇರೆ ಬೇರೆ ರೀತಿಯ ಗಾಳಿಪಟಗಳು ಪ್ರಮುಖ ಆಕರ್ಷಣೆಯಾಗಿವೆ.
8 ರಾಜ್ಯಗಳ ಸುಮಾರು 51 ಗಾಳಿಪಟ ಹಾರಾಟಗಾರರು ಮತ್ತು 31 ಬೇರೆ ದೇಶಗಳಿಂದ 100 ಕ್ಕೂ ಹೆಚ್ಚು ಗಾಳಿಪಟ ಹಾರಾಟಗಾರರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಕೆನಡಾ, ಜರ್ಮನಿ, ಇಸ್ರೆಲ್, ಇಟಲಿ, ನೆದರ್ಲ್ಯಾಂಡ್, ನ್ಯೂಝೆಲ್ಯಾಂಡ್, ಪೊಲಂಡ್, ರಷ್ಯಾ, ಸಿಂಗಾಪೂರ, ಸ್ಪೇನ್, ಸ್ವಿಜರ್ಲ್ಯಾಂಡ್, ಯುನೈಟೆಡ್ ಕಿಂಗಡಮ್ ಮತ್ತು ಯುಎಸ್ಎ ದೇಶಗಳಿಂದ ಪ್ರಸಿದ್ಧ ಗಾಳಿಪಟ ಹಾರಾಟಗಾರರು ಭಾಗವಹಿಸಲಿದ್ದಾರೆ.
ಅಂತಾರಾಷ್ಟ್ರೀಯ ಗಾಳಿಪಟದ ಉತ್ಸವದ ಅಂಗವಾಗಿ ಈ ಹಾರಾಟಗಾರರು ಪಾಲಾನಪುರ್, ರಾಜಕೋಟ, ವಡೊದರಾ, ಪಾವಘಡ, ವಲ್ಸದ ಮತ್ತು ಗಾಂಧಿಧಾಮ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.