ಮೂಲ್ಕಿ: ಬಿಜೆಪಿ ಸ್ಲಂಮೋರ್ಚಾ ಮೂಲ್ಕಿ- ಮೂಡಬಿದಿರೆ ಪದಗ್ರಹಣ ಮತ್ತು ಕಾರ್ಯಕಾರಿಣಿ ಸಭೆಯು ಮೂಲ್ಕಿ ಸ್ವಾಗತ ಸಭಾಭವನದಲ್ಲಿ ದಿನಾಂಕ 1-1-2017 ರಂದು ಜರಗಿತು.
ಸಭೆಯನ್ನು ಸ್ಲಂಮೋರ್ಚಾ ಜಿಲ್ಲಾ ಅಧ್ಯಕ್ಷರಾದ ರಾಮ ಅಮೀನ್ ಪಚ್ಚನಾಡಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಬಿಜೆಪಿ ಸ್ಲಂ ಮೋರ್ಚಾವು ಎಲ್ಲಾ ವರ್ಗದವರ ಜನ ಸೇವೆ ಮಾಡುವಂತಹ ಮಹತ್ ಕಾರ್ಯವನ್ನು ಪಕ್ಷವು ನಮಗೆ ಒದಗಿಸಿರುತ್ತದೆ. ದೀನದಯಾಳ ಉಪಾಧ್ಯಾಯರ ಕನಸಿನಂತೆ ಅತ್ಯಂತ ಕೆಳಸ್ತರದ ಜನರ ಸೇವೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಮಾಡಬೇಕಾಗಿದೆ. ಕೇಂದ್ರ ಸರಕಾರದ ಸೌಲಭ್ಯಗಳನ್ನು ಅನಕ್ಷರಸ್ತರು ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿನೀಡಿ ಅದರ ಪ್ರಯೋಜನವನ್ನು ಜನಸಾಮನ್ಯರಿಗೆ ತಲುಪುವಂತೆ ಮಾಡಬೇಕಾಗಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ಮೂಲ್ಕಿ-ಮೂಡಬಿದಿರೆ ಸ್ಲಂಮೋರ್ಚಾ ಅಧ್ಯಕ್ಷರಾದ ನವೀನ್ರಾಜ್ ಬಪ್ಪನಾಡು ಅವರಿಗೆ ಪಕ್ಷ ದ್ವಜ ನೀಡುವುದರ ಮೂಲಕ ಅಧಿಕೃತವಾಗಿ ಪಕ್ಷದ ಜವಾಬ್ದಾರಿಯನ್ನು ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ. ಕೇಂದ್ರ ಸರಕಾರದ ಪ್ರಸ್ತುತ ಅಪನಗಧೀಕರಣ ಮತ್ತು ಕೇಂದ್ರ ಸರಕಾರವು ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳ ವಿವರಣೆ ನೀಡಿದರು.
ನೂತನ ಅಧ್ಯಕ್ಷರು ಸ್ಲಂಮೋರ್ಚಾದ ಕೆಲಸವನ್ನು ಸಂಪೂರ್ಣ ಕಾರ್ಯಗತ ಗೊಳಿಸಲು ಸ್ಲಂ ಸದಸ್ಯರ ಸಹಕಾರ ಯಾಚಿಸಿದರು. ಈ ಸಂದರ್ಭದಲ್ಲಿ ಮೂಲ್ಕಿ-ಮೂಡಬಿದಿರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಯಾನಂದ ಮೂಲ್ಕಿ ,ಮೂಲ್ಕಿ ನಗರ ಪಂಚಾಯತ್ ಸದಸ್ಯ ಸುನೀಲ್ ಆಳ್ವ, ಮೂಲ್ಕಿ ವಿಧಾನ ಸಭಾ ಕ್ಷೇತ್ರದ ಸ್ಲಂಮೋರ್ಚಾದ ಪ್ರಧಾನ ಕಾರ್ಯದರ್ಶಿ ದಯಾನಂದ ಸುವರ್ಣ , ಉಪಾಧ್ಯಕ್ಷ ವೀರಣ್ಣ ಆರಳಗುಂಡಗಿ, ಜಯ ದೇವಾಡಿಗ , ಶಕ್ತಿ ಕೇಂದ್ರದ ಅಧ್ಯಕ್ಷ ಸತ್ಯೇಂದ್ರ ಶೆಣ್ಯೆ, ,ಪ್ರವೀಣ್ ಕೊಡಿಯಾಲ್ಬ್ಯೆಲ್, ಹೇಮಂತ, ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.