ದನ-ಕರುಗಳು, ವಿಶೇಷವಾಗಿ ಪೇಟೆಗಳಲ್ಲಿ ಅಲೆದಾಡುವ ಪ್ರಾಣಿಗಳು ಹುಲ್ಲು-ಆಹಾರ ದೊರಕದೇ ಕಸದ ತೊಟ್ಟಿ, ತ್ಯಾಜ್ಯ ವಿಲೇವಾರಿ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಮತ್ತಿತರ ವಸ್ತುಗಳನ್ನು ತಿನ್ನುವುದು ಕಂಡಿದ್ದೇವೆ.
ಇದೀಗ ಮಂಗಳೂರು ಮೂಲದ ಕತಾರ್ ನಿವಾಸಿ ಅಶ್ವಥ್ ಹೆಗ್ಡೆ ಅವರು ಪ್ರಾಣಗಳಿಗೆ ಯಾವುದೇ ಪ್ರಾಣಾಪಾಯವಿಲ್ಲದ ಪ್ಲಾಸ್ಟಿಕ್ನಂತೆ ಕಾಣುವ ಚೀಲಗಳನ್ನು ತಯಾರಿಸಿದ್ದಾರೆ.
ಭಾರತದ ಹಲವು ನಗರಗಳಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧವನ್ನು ಸ್ವಾಗತಾರ್ಹ ಎಂದು ಜನರು ಶ್ಲಾಘಿಸಿದ್ದಾರೆ. ಇನ್ನು ಮಾರುಕಟ್ಟೆಗೆ ತೆರಳುವ ವೇಳೆ ಚೀಲಗಳನ್ನು ಮರೆಯುವ ಸಂದರ್ಭಗಳು ಉಂಟಾದಲ್ಲಿ ಪರ್ಯಾಯ ವ್ಯವಸ್ಥೆ ಕಂಡು ಹಿಡಿಯಲು ಅಸಾಧ್ಯರಾದವರು ಈ ಬಗ್ಗೆ ಚಿಂತಿಸುತ್ತಿದ್ದಾರೆ.
2012ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತಯಾರಿಕೆ, ಬಳಕೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿತ್ತು. ಯಾವುದೇ ಪರ್ಯಾಯ ಯೋಜನೆ ಇಲ್ಲದೇ ಈ ಯೋಜನೆ ಕೈಗೊಳ್ಳಲಾಗಿದ್ದು, ಜನರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
4 ವರ್ಷಗಳ ಸಂಶೋಧನೆ ನಂತರ ಅಶ್ವಥ್ ಅವರು EnviGreen ಕಂಪೆನಿ ಸ್ಥಾಪಿಸಿದ್ದು, ಕಂಪೆನಿ ಜೈವಿಕ ಮತ್ತು ಪರಿಸರ ಸ್ನೇಹಿ ಚೀಲಗಳನ್ನು ತಯಾರಿಸುತ್ತಿದೆ. ಬಿಳಿ ಪ್ಲಾಸ್ಟಿಕ್ನಂತೆ ಕಾಣುವ ಈ ಚೀಲಗಳನ್ನು ಆಲೂಗಡ್ಡೆ, ಮರಗೆಣಸು, ತರಕಾರಿಗಳಿಂದ ತೆಗೆಯಲಾದ ಎಣ್ಣೆ, ನೈಸರ್ಗಿಕ ಸ್ಟಾರ್ಚ್ ಉತ್ಪನ್ನಗಳಿಂದ ತಯಾರಿಸಲಾಗಿದೆ.
ಒಂದು ಬಾರಿ ಎಸೆದಲ್ಲಿ 180 ದಿನಗಳ ಒಳಗೆ ಇದು ಮಣ್ಣಿನಲ್ಲಿ ನಶಿಸುತ್ತವೆ. ಇದು ನೀರಿನಲ್ಲೂ ಕರಗುತ್ತದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇದರ ಹಲವು ಪರೀಕ್ಷೆಗಳನ್ನು ನಡೆಸಿ ನೈಸರ್ಗಿಕ ಪ್ಲಾಸ್ಟಿಕ್ ಬಳಕೆಗೆ ಅನುಮತಿ ನೀಡಿದೆ. ಶ್ರೀರಾಮ ಕೈಗಾರಿಕಾ ಸಂಶೋಧನೆ ಸಂಸ್ಥೆ ಹಾಗೂ ಕೇಂದ್ರ ಪ್ಲಾಸ್ಟಿಕ್ ಇಂಜಿಯರಿಂಗ್ ಇನ್ಸ್ಟಿಟ್ಯೂಟ್ ಕೂಡ ಇದರ ಪರೀಕ್ಷೆಗಳನ್ನು ನಡೆಸಿದೆ.
ಅಶ್ವಥ್ ಅವರು ಬೆಂಗಳೂರಿನಲ್ಲಿ ಚೀಲ ಉತ್ಪಾದನಾ ಕಾರ್ಖಾನೆ ಸ್ಥಾಪಿಸಿದ್ದು, ಪ್ರತಿ ತಿಂಗಳು 1,000 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತಯಾರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.