ಉಪ್ಪುಂದ: ಉಪ್ಪುಂದ ಉದ್ಯಮಶೀಲರ, ಸಾಧಕರ ಊರು. ಅವರಿಗೆ ಆರ್ಥಿಕ ಬೆಂಬಲ ದೊರೆತರೆ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಅದರ ಫಲ ಊರಿಗೆ ದೊರೆಯುತ್ತದೆ. ಇಲ್ಲಿ ಆರಂಭವಾಗುತ್ತಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಅದಕ್ಕೆ ಮುಂದಾಗಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದರು ಸೂಚಿಸಿದರು.
ಉಪ್ಪುಂದದ ರಾಷ್ಟ್ರೀಯ ಹೆದ್ದಾರಿ ಸಮೀಪ ಆರಂಭವಾದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಶಾಖೆಯನ್ನು ಉದ್ಘಾಟಿಸಿದ ಬಳಿಕ ಅವರು ಆಶೀರ್ವಚನ ನೀಡಿ ಮಾತನಾಡಿದರು. ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಬೇಕಾದರೆ ಅವುಗಳಿಂದ ಸಾಲ ಪಡೆದವರು ಸಕಾಲದಲ್ಲಿ ಮರು ಪಾವತಿಸಬೇಕು. ಸಾಮರ್ಥ್ಯ ಉಳ್ಳವರು ಠೇವಣಿ ಇರಿಸಬೇಕು. ಆಡಳಿತ ಸಮಿತಿ ಒಮ್ಮತದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಹಕಾರಿಯ ಅಧ್ಯಕ್ಷ ಎಚ್. ಗಣೇಶ ಕಾಮತ್ ಸ್ವಾಗತಿಸಿ, ೯೫ ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಸಹಕಾರಿ ಸಾಗಿಬಂದ ದಾರಿಯ ಮೇಲೆ ಬೆಳಕು ಚೆಲ್ಲಿದರು. ಆಹ್ವಾನಿತರಾಗಿದ್ದ ಹೋಟೆಲ್ ಉದ್ಯಮಿ ಯು. ಸದಾನಂದ ಪ್ರಭು, ಉಪ್ಪುಂದ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣು ಪಡಿಯಾರ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಜಗನ್ನಾಥ, ಸಾಹಿತಿ ಯು. ಚಂದ್ರಶೇಖರ ಹೊಳ್ಳ, ಉದ್ಯಮಿ ಬಿ. ಎಸ್. ಸುರೇಶ ಶೆಟ್ಟಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಭಾಸ್ಕರ ಕಾಮತ್, ಭಟ್ಕಳದ ಉದ್ಯಮಿ ಹನುಮಂತ ಪೈ, ಗಂಗೊಳ್ಳಿಯ ಉದ್ಯಮಿ ಬಿ. ಮಂಜುನಾಥ ಶೆಣೈ, ಶಿರಾಲಿಯ ವೆಂಕಟೇಶ ಪ್ರಭು ಉಪಸ್ಥಿತರಿದ್ದರು. ಉಪಾಧ್ಯಕ್ಷ ಜಿ. ವೇದವ್ಯಾಸ ಆಚಾರ್ಯ ವಂದಿಸಿದರು. ಕಾರ್ಯದರ್ಶಿ ಗಣೇಶ ನಾಯಕ್ ನಿರೂಪಿಸಿದರು. ಕಟ್ಟಡದ ಮಾಲೀಕ ಗೋವಿಂದ ದೇವಾಡಿಗ ಮತ್ತು ಶಾಖೆಯ ಸಲಹೆಗಾರ ಕೆ. ಪುಂಡಲೀಕ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.