ಮುಂಬಯಿ: ಭಾರತ ಆಡಲಿರುವ 500ನೇ ಟೆಸ್ಟ್ ಪಂದ್ಯದ ವೇಳೆ ಆಗಮಿಸುವಂತೆ ಬಿಸಿಸಿಐ ಮಾಜಿ ನಾಯಕರನ್ನು ಆಹ್ವಾನಿಸಿದೆ. ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಸೆಪ್ಟೆಂಬರ್ 22ರಂದು ಕಾನ್ಪುರದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ ಭಾರತದ 500ನೇ ಟೆಸ್ಟ್ ಪಂದ್ಯ ಆಗಿರಲಿದೆ.
ಈ ಪಂದ್ಯವನ್ನು ಗುರುತಿಸಲು ಟಾಸ್ಗಾಗಿ 500ನೇ ಟೆಸ್ಟ್ ಎಂದು ಮುದ್ರಿಸಿದ ವಿಶೇಷ ಬೆಳ್ಳಿ ನಾಣ್ಯವನ್ನು ಸಿದ್ಧಪಡಿಸಲಾಗಿದೆ.
ಈ ಪಂದ್ಯದ ಸ್ಮರಣಾರ್ಥವಾಗಿ ಬಿಸಿಸಿಐ ವಿವಿಧ ಕಾರ್ಯಕ್ರಮಗಳನ್ನು ಆಯಜಿಸಲಾಗುವುದು ಎಂದು ಬಿಸಿಸಿಐ ಅಧ್ದಯಕ್ಷ ಹಾಗೂ ಯುಪಿಸಿಎ ಮುಖಂಡ ರಾಜೀವ್ ಶುಕ್ಲ ಹೇಳಿದ್ದಾರೆ.
ಈ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕರನ್ನು ಬಿಸಿಸಿಐ ಸನ್ಮಾನಿಸಲಿದೆ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ 3 ಟೆಸ್ಟ್, 5 ಏಕದಿನ ಪಂದ್ಯಗಳು ನಡೆಯಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.