ಹೊಸದಿಲ್ಲಿ: 10 ಕೋಟಿ ರೂ. ಅಥವಾ ಮೂರು ವರ್ಷಗಳ ಅವಧಿಯಲ್ಲಿ 25 ಕೋಟಿ ರೂ. ಹೂಡಿಕೆ ಮಾಡುವ ವಿದೇಶಿಗರು ಇನ್ಮುಂದೆ ಭಾರತದಲ್ಲಿ 20 ವರ್ಷಗಳವರೆಗೆ ವಾಸಿಸಲು ಪರ್ಮಿಟ್ ಪಡೆಯಬಹುದಾಗಿದೆ. ಈ ಕುರಿತ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ವಿದೇಶಿ ನಾಗರಿಕರಿಂದ ಹೂಡಿಕೆ ಆಕರ್ಷಿಸಿ, ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ ಇದಾಗಿದ್ದು, ವಿದೇಶಿಗರು 18 ತಿಂಗಳುಗಳ ಅವಧಿಯಲ್ಲಿ 10 ಕೋಟಿ ರೂ. ಅಥವಾ 3 ವರ್ಷಗಳ ಅವಧಿಯಲ್ಲಿ 25 ಕೋಟಿ ರೂ. ಹೂಡಿಕೆ ಮಾಡುವವರು ಭಾರತದಲ್ಲಿ 10 ವರ್ಷಗಳ ಕಾಲ ವಾಸಿಸಲು ಪರ್ಮಿಟ್ ಪಡೆಯಬಹುದು. 10 ವರ್ಷಗಳು ಮುಗಿದ ಬಳಿಕ ಪರ್ಮಿಟ್ ಅನ್ನು ಇನ್ನು 10 ವರ್ಷ ವಿಸ್ತರಿಸಲು ಅವಕಾಶವಿರುತ್ತದೆ. ಹೂಡಿಕೆ ಮಾಡುವವರು ವಸತಿಗಾಗಿ ಆಸ್ತಿಯನ್ನು ಖರೀದಿಸಬಹುದಾಗಿದೆ. ಈ ರೀತಿ ಹೂಡಿಕೆ ಮಾಡುವವರಿಗೆ ಕೇಂದ್ರ ಸರ್ಕಾರವು ವೀಸಾ ನೀಡಲಿದೆ.
ಆದರೆ ಈ ಯೋಜನೆಯು ಪಾಕಿಸ್ಥಾನ ಮತ್ತು ಚೀನಾ ನಾಗರಿಕರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.