ಪಾಟ್ನಾ : ಪಾಟ್ನಾದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವೈದ್ಯಕೀಯ ಶಿಕ್ಷಣದ ಜೊತೆ ಜೊತೆಗೆ 9 ತಿಂಗಳ ಸಂಸ್ಕೃತ ಕೋರ್ಸ್ನ್ನು ಆರಂಭಿಸಲು ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗಾಗಿ ಈ ಕೋರ್ಸ್ನ್ನು ಅದು ಆರಂಭಿಸುತ್ತಿದೆ.
ಇಲ್ಲಿ ಸಂಸ್ಕೃತ ಶಬ್ದಗಳ ಜೋಡಣೆ ಮಾತ್ರವಲ್ಲದೆ, ವೈದ್ಯಕೀಯ ಪರಿಭಾಷೆಗೆ ಸಂಸ್ಕೃತ ಪದಗಳನ್ನೂ ಕೂಡಾ ಕಲಿಸಿಕೊಡಲಾಗುತ್ತದೆ.
ನಿತ್ಯ ಎರಡು ಗಂಟೆಗಳ ಕಾಲ ಈ ಕೋರ್ಸ್ ನಡೆಯಲಿದ್ದು, ಇದು ಒಂದು ಆಪ್ಷನಲ್ ಕೋರ್ಸ್ ಆಗಿದೆ. ಇದನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣವಾದ ಬಳಿಕ ಹೆಚ್ಆರ್ಡಿ ಸಚಿವಾಲಯದಿಂದ ಸರ್ಟಿಫಿಕೇಟ್ ಕೂಡಾ ದೊರಕಲಿದೆ ಎಂದು ಎಐಐಎಂಎಸ್-ಪಾಟ್ನಾ ಡೈರೆಕ್ಟರ್ ಜಿ. ಕೆ. ಸಿಂಗ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.