ಬೀಜಿಂಗ್ : ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಅವರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದಿದೆ.
ಎನ್ಎಸ್ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವುದಕ್ಕೆ ಭಾರತ ಚೀನಾವನ್ನು ದೂಷಿಸುವುದು ಸರಿಯಲ್ಲ. ಈ ವಿಷಯದಲ್ಲಿ ಭಾರತ ಬೇಸರಿಸಿಕೊಳ್ಳಬಾರದು. ಎನ್ಎಸ್ಜಿಯ ಬಾಗಿಲನ್ನು ಇನ್ನೂ ಗಟ್ಟಿಯಾಗಿ ಮುಚ್ಚಿಲ್ಲ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಝ್ಸಿನುವ ಹೇಳಿದೆ.
ಒಂದೇ ಒಂದು ದೇಶ ಭಾರತದ ಎನ್ಎಸ್ಜಿ ಸದಸ್ಯತ್ವವನ್ನು ತಡೆಯಿತು ಎಂದು ಹೇಳುವ ಮೂಲಕ ಭಾರತ ಚೀನಾ ವಿರುದ್ಧ ನೇರ ಆಪಾದನೆ ಮಾಡಿದೆ. ಅಲ್ಲದೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಎನ್ಎಸ್ಜಿ ಗೆಲುವು ಪಡೆಯುವುದಕ್ಕೆ ಭಾರತ ಚೀನಾದೊಂದಿಗಿನ ಮಾತುಕತೆಯನ್ನು ಮುಂದುವರೆಸಲಿದೆ ಎಂದಿದ್ದಾರೆ.
ಇದೀಗ ಭಾರತಕ್ಕೆ ಆಗಮಿಸಿರುವ ಅಲ್ಲಿನ ವಿದೇಶಾಂಗ ಸಚಿವ ಭಾರತದೊಂದಿಗೆ ಭಿನ್ನಾಭಿಪ್ರಾಯವನ್ನು ಶಮನಗೊಳಿಸುವ ಪ್ರಯತ್ನವನ್ನು ಮಾಡಲಿದ್ದಾರೆ. ಆದರೆ ಎನ್ಎಸ್ಜಿ ಬಗ್ಗೆ ಅವರೇನಾದರೂ ಸಲಹೆ ಸೂಚನೆಗಳನ್ನು ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.