ನವದೆಹಲಿ: ನೇಪಾಳ ಮತ್ತು ಭಾರತದಲ್ಲಿ ಸಂಭವಿಸಿರುವ ಭೀಕರ ಭೂಕಂಪದಲ್ಲಿ ಸಂತ್ರಸ್ಥರಾದವರ ರಕ್ಷಣಾಕಾರ್ಯದಲ್ಲಿ ಮಹತ್ವದ ಸಹಕಾರ ನೀಡುತ್ತಿರುವ ಎಲ್ಲಾ ರಾಜ್ಯಗಳನ್ನು, ರಾಷ್ಟ್ರೀಯ ವಿಪತ್ತು ದಳ, ಮಾಧ್ಯಮ ಮತ್ತು ಇತರ ಏಜೆನ್ಸಿಗಳ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಪ್ರಧಾನಿಗೆ ಧನ್ಯವಾದ ಎನ್ನುತ್ತಿರುವ ಎಲ್ಲರ ಭಾವನೆಗಳನ್ನು ಶ್ಲಾಘಿಸುತ್ತೇನೆ ಆದರೆ ನಿಜವಾದ ಧನ್ಯವಾದ ಹೇಳಬೇಕಾದುದು ‘ಸೇವಾ ಪರಮೋ ಧರ್ಮ’ ಎಂಬ ನಮ್ಮ ಸಂಸ್ಕೃತಿಗೆ.’
‘ನಿಜವಾಗಿಯೂ ನೀವು ಯಾರಿಗಾದರೂ ಧನ್ಯವಾದ ಹೇಳಬೇಕೆಂದಿದ್ದರೆ, ಅದು ನೇಪಾಳದ ನೋವನ್ನು ತಮ್ಮ ನೋವೆಂದು ಭಾವಿಸಿ ಸಹಾಯಹಸ್ತ ಚಾಚುತ್ತಿರುವ 125 ಕೋಟಿ ಭಾರತೀಯರಿಗೆ’ ಎಂದಿದ್ದಾರೆ.
ಅಲ್ಲದೇ ಇಂತಹ ಭೀಕರ ದುರಂತದ ವಿರುದ್ಧ ಹೋರಾಡುತ್ತಿರುವ ನೇಪಾಳದ ಜನರ ಎದೆಗಾರಿಕೆಗೆ ಸೆಲ್ಯೂಟ್ ಅವರು ನೀಡಿದ್ದಾರೆ. ಯೋಧರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಸ್ವಯಂಸೇವಕರ, ಡಾಕ್ಟರ್ಗಳ ಶ್ರಮವನ್ನು ಶ್ಲಾಘಿಸಿದ್ದಾರೆ. ಪರಿಹಾರ ಕಾರ್ಯಕ್ಕೆ ಶೀಘ್ರ ಸಹಕಾರ ನೀಡುತ್ತಿರುವ ರಾಜ್ಯಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ದುರಂತದ ಬಗ್ಗೆ ವರದಿ ಮಾಡುತ್ತಿರುವ ಮಾಧ್ಯಮಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.