ಉಜಿರೆ : “ದೇಶಕ್ಕೆ ಲಕ್ಷ್ಮೀದೇವಿಯ ಅನುಗ್ರಹವಾಗುವ ಮೊದಲು ಸರಸ್ವತಿಯ ಅನುಗ್ರಹವಾಗಲಿ, ಅಂದರೆ ಸಂಪತ್ತಿಗಿಂತ ಮೊದಲು ಭಾರತೀಯರೆಲ್ಲ ವಿದ್ಯಾವಂತರಾಗಬೇಕು ಆಗ ಸಂಪತ್ತಿನ ಜೊತೆಗೆ ಬದುಕಿಗೊಂದು ಅರ್ಥವೂ ಬರುತ್ತದೆ” ಎಂದು ಕಲಾಂ ಪ್ರತಿಪಾದಿಸಿದ್ದರು.
ಜುಲೈ 20, 2016 ರ ಬುಧವಾರದಂದು ಉಜಿರೆಯ ಶಾರದಾಮಂಟಪದಲ್ಲಿ, ಅಭಾವಿಪ ಮತ್ತು ವೀರಕೇಸರಿ ಸಹಭಾಗಿತ್ವದಲ್ಲಿ ನಡೆದ “ಕಲಾಂ ಸಂಭ್ರಮ” ಕಾರ್ಯಕ್ರಮದಲ್ಲಿ ಕಲಾಂರ ಬದುಕಿನ ಬಗ್ಗೆ ಮಾತನಾಡುತ್ತಾ, ಅವರ ಅಧ್ಯಾತ್ಮಿಕ ಅನುಯಾಯಿ ಹಾಗೂ ನಿಕಟವರ್ತಿಗಳಾಗಿದ್ದ ಕರ್ನಲ್ ಅಶೋಕ್ ಕಿಣಿಯವರು ವಿವರಿಸಿದರು.
ನಮ್ಮ ಹೃದಯಗಳಲ್ಲಿ ಭಗವದ್ಗೀತೆ, ಕುರಾನ್, ಬೈಬಲ್ ಬಗ್ಗೆ ಭಕ್ತಿಯಿರಲಿ, ಅದಕ್ಕಿಂತಲೂ ಮಿಗಿಲಾದ ಭಕ್ತಿ ಹಿಂದುಸ್ತಾನದ ಮೇಲಿರಲಿ. ಭಾರತೀಯ ಪರಂಪರೆ ಹೇಳುವಂತೆ ಪ್ರತಿಯೊಬ್ಬನೂ ಆತ್ಮದಲ್ಲಿಯೂ ಪರಮಾತ್ಮನಿರುವಾಗ ನಮ್ಮಲ್ಲಿ ‘ದ್ವೇಷ’ ಎಂಬ ಪದಕ್ಕೆ ಜಾಗವೇ ಇರುವುದಿಲ್ಲ. ಈ ಧ್ಯೇಯದೊಂದಿಗೆ ನಾವು ಮುಂದುವರಿದರೆ ನಾವು ಕಂಡ ‘ವಿಷನ್-2020’ ಖಂಡಿತ ಸಾಕಾರವಾಗುತ್ತದೆ ಎನ್ನುತ್ತಿದ್ದರು. ಹಾಗೆಯೇ 2020ರಲ್ಲಿ 1 ಡಾಲರ್= 20 ರೂ. ಆಗಿರುತ್ತದೆ ಎನ್ನುವಾಗ ಅವರ ಕಣ್ಣುಗಳು ಅರಳುತ್ತಿದ್ದವು. ಆಂತರಿಕ ಕಚ್ಚಾಟದ ಬದಲಾಗಿ ಅಂತಹ ದೂರದರ್ಶಿಯ ಆದರ್ಶದ ನೆರಳಿನಲ್ಲಿ ನಡೆದು ವಿಷನ್-2020 ಯ ಅವರ ಕನಸನ್ನು ಸಾಕಾರಗೊಳಿಸೋಣ ಎಂದು ಕಲಾಂ ಅವರ ಆಶಯವನ್ನು ಕರ್ನಲ್ ಅಶೋಕ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಧರ್ಮ ಜಾಗರಣ ಪ್ರಮುಖ್ ದಿನಕರ್ ಅದೇಲು, ಆರೋಗ್ಯಭಾರತಿ ಜಿಲ್ಲಾ ಸದಸ್ಯೆ ಕು. ಅಕ್ಷತಾ ಬಜಪೆ, ಅಭಾವಿಪ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಶೆಟ್ಟಿ ವೀರ ಕೇಸರಿಯ ಸಂಚಾಲಕ ಅನುರಾಜ್ ಕೂಟದಕಲ್ಲು ಉಪಸ್ಥಿತರಿದ್ದರು. ವೀರ ಕೇಸರಿಯ ಪರವಾಗಿ ಅಶೋಕ್ ಕಿಣಿ ಯವರನ್ನು ಸತೀಶ್ ಶೆಟ್ಟಿ ಮತ್ತು ಸುಧಾಕರ್ ಧರ್ಮಸ್ಥಳ ಗೌರವಿಸಿದರು. ಚಂದನ್ ಗುಡಿಗಾರ್ ಸ್ವಾಗತಿಸಿ ನವೀನ್ ಕನ್ಯಾಡಿ ವಂದಿಸಿದರು. ಅಭಿಷೇಕ್ ಭಟ್ ಮಹೇಶ್ ಕಿಣಿ ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.