ಸುಳ್ಯ : ಗಡಿ ಗ್ರಾಮವಾದ ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಹಿಂದು ಸೌಹಾರ್ದ ಸಂಗಮ ನಡೆಯಲಿದೆ.
ಸೌಹಾರ್ದ ಸಂಗಮವನ್ನು ಕೇರಳ ಹಿಂದೂ ಐಕ್ಯ ವೇದಿಯ ರಾಜ್ಯ ಉಪಾಧ್ಯಕ್ಷ ಕುಂಟಾರು ರವೀಶ ತಂತ್ರಿ ಉದ್ಘಾಟಿಸುವರು. ಸಂಸ್ಕಾರ ಭಾರತಿಯ ಮಂಗಳೂರು ವಿಭಾಗ ಸಂಚಾಲಕ ಆದರ್ಶ ಗೋಖಲೆ ಮುಖ್ಯ ಭಾಷಣ ಮಾಡಲಿದ್ದಾರೆ.
ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕಿ ವೇದಾವತಿ ಅನಂತ ಅಧ್ಯಕ್ಷತೆ ವಹಿಸುವರು. ಸಮಾರಂಭಕ್ಕೆ ಮುನ್ನ ಎರಡು ಕಡೆಗಳಿಂದ ಶೋಭಾಯಾತ್ರೆ ಆಗಮಿಸಿ ಕಲ್ಲಪಳ್ಳಿ ಶಾಲಾ ಮೈದಾನದಲ್ಲಿ ಸಂಗಮಿಸಲಿದೆ.
ಸೌಹಾರ್ದ ಸಂಗಮದ ಅಂಗವಾಗಿ ದೇಶಭಕ್ತಿ ಗಾನಸುಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಕೇರಳ ಮತ್ತು ಕರ್ನಾಟಕದ ಗಡಿಪ್ರದೇಶದಲ್ಲಿ ನಡೆಯುವ ಸೌಹಾರ್ದ ಸಂಗಮಕ್ಕೆ ಭರದ ಸಿದ್ಧತೆ ನಡೆದಿದೆ.
ಕೇಸರಿ ಬ್ಯಾನರ್, ಪ್ಲೆಕ್ಸ್, ಬಂಟಿಂಗ್ಸ್ ಗಳಿಂದ ಶೃಂಗರಿಸಲಾಗಿದ್ದು ಎಲ್ಲೆಡೆ ಕೇಸರಿಮಯವಾಗಿ ಕಂಗೊಳಿಸುತಿದೆ. ಎರಡೂ ಕಡೆಗಳಲ್ಲಿ ಬೃಹತ್ ದ್ವಾರಗಳನ್ನು ನಿರ್ಮಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.