ಚೆನ್ನೈ; ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ರಜನೀಕಾಂತ್ ಅವರ ನೂತನ ಸಿನಿಮಾ ’ಕಬಾಲಿ’ ಬಿಡುಗಡೆಗೆ ಮುನ್ನವೇ ಭಾರೀ ಕ್ರೇಝ್ ಹುಟ್ಟು ಹಾಕಿದೆ. ಯುವಕರಿಂದ ಹಿಡಿದು ವಯಸ್ಸಾದವರವರೆಗೂ ಈ ಸಿನಿಮಾದ್ದೇ ಜಪ.
ಕಬಾಲಿ ಸಿನಿಮಾದೊಂದಿಗೆ ಏರ್ ಏಷ್ಯಾ ಪ್ರಚಾರ ಪಾಲುದಾರಿಕೆ ಮಾಡಿಕೊಂಡಿದ್ದು, ವಿಶೇಷ ವಿಮಾನವು ಕಬಾಲಿ ಸಿನಿಮಾ ಬಿಡುಗಡೆಯ ದಿನವೇ ಟೇಕ್ ಆಫ್ ಆಗಲಿದೆ.
ಕಬಾಲಿ ವಿಶೇಷ ವಿಮಾನದ ಮೇಲೆ ಅದರ ಪೋಸ್ಟರ್ ಹಾಕಲಾಗಿದೆ. ಅದರ ಹೊರಭಾಗದಲ್ಲಿ ಕಬಾಲಿ ನಾಯಕ ರಜನೀಕಾಂತ್ ಅವರ ದೊಡ್ಡ ಫೋಟೋವಿದೆ.
ಕಬಾಲಿ ಸಿನಿಮಾ ಜುಲೈ 15ರಂದು ಬಿಡುಗಡೆಯಾಗಲಿದ್ದು, ರಜನೀಕಾಂತ್ ಅಭಿಮಾನಿಗಳಿಗಾಗಿ ಈ ವಿಮಾನವು ಬಿಡುಗಡೆಯ ಮೊದಲ ದಿನ ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸಲಿದೆ, ಇದರೊಳಗಿನ ಅತಿಥಿಗಳಿಗೆ ಕಬಾಲಿ ಥೀಮ್ನ ಆಹಾರ ಸಿಗಲಿದೆ.
ಸಿನಿಮಾದ ’ನೆರುಪುಡ’ ಗೀತೆಯ ಹಿಟ್ನ ಸಂಭ್ರಮಕ್ಕಾಗಿ ಏರ್ ಏಷ್ಯಾವು ಕಬಾಲಿ ಥೀಮ್ನ ಏರ್ಕ್ರಾಫ್ಟ್ ಜ್ವಾಲೆಯಂತೆ ಮಿನುಗುವ ಫೋಟೋಗ್ರಫಿಯನ್ನು ಬಿಡುಗಡೆ ಮಾಡಿದೆ.
ಈ ವಿಮಾನ ಬೆಂಗಳೂರು, ನವದೆಹಲಿ, ಗೋವಾ, ಪುಣೆ, ಕೊಚ್ಚಿ ಸೇರಿದಂತೆ 10 ಸಿಟಿಗಳನ್ನು ಚೆನ್ನೈ ಜೊತೆ ಸಿನಿಮಾದ ಮೊದಲ ದಿನ ಕನೆಕ್ಟ್ ಮಾಡಲಿದೆ. ಇದಕ್ಕೆಂದೇ 6 ವಿಮಾನಗಳನ್ನು ಮೀಸಲಿರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.