ಪುತ್ತೂರು : ಯೋಗವನ್ನು ನಿರಂತರವಾಗಿ ಮಾಡಿದಾಗ ಮಾತ್ರ ಅದರ ಯಶಸ್ಸಿನ ಗುಟ್ಟು ದೊರೆಯಲು ಸಾಧ್ಯ. ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಯೋಗವನ್ನು ನಿತ್ಯದ ಜೀವನದ ಭಾಗವಾಗಿ ಮಾಡಿದಾಗ ಮಾತ್ರ ಪರಿಪೂರ್ಣತೆ ಪಡೆಯಲು ಸಾದ್ಯ ಎಂದು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು.
ಅವರು ಮಂಗಳವಾರ ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಭಾರತ ಸರಕಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವಕೇಂದ್ರ ಮಂಗಳೂರು, ತಾಲೂಕು ಯುವಜನ ಒಕ್ಕೂಟ ಪುತ್ತೂರು, ಶ್ರೀವಿಷ್ಣು ಮಿತ್ರವೃಂದ ಪಾಲ್ತಾಡು ಇದರ ಆಶ್ರಯದಲ್ಲಿ ಮಣಿಕ್ಕರ ಪ್ರೌಢಶಾಲೆಯ ಸಹಭಾಗಿತ್ವದೊಂದಿಗೆ ನಡೆದ ವಿಶ್ವಯೋಗ ದಿನಾಚರಣೆಯನ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪಾಲತಾ ಪಿ. ಯೋಗ, ಪ್ರಾಣಾಯಾi ಕುರಿತು ಸವಿವರವಾಗಿ ತಿಳಿಸಿ ಮಕ್ಕಳಿಗೆ ಯೋಗಭ್ಯಾಸ ನಡೆಸಿದರು.
ಅತಿಥಿ ಕೊಳ್ತಿಗೆ ಗ್ರಾ.ಪಂ ಸದಸ್ಯ ಸುಂದರ ಪೂಜಾರಿ ಮಣಿಕ್ಕರ ಮಾತನಾಡಿ, ಜಗತ್ತಿಗೆ ಯೋಗವನ್ನು ಭೋಧಿಸಿದ ರಾಷ್ಟ್ರ ಭಾರತ. ಕಳೆದ ವರ್ಷದಿಂದ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಗುರಿಯಿಂದ ಇಂದು ವಿಶ್ವೆದೆಲ್ಲಡೆ ಯೋಗದಿನಾಚರಣೆ ಮಾಡುವಂತಾಗಿದೆ ಯೋಗದಿಂದ ಆರೋಗ್ಯಯುತ ಜೀವನ ನಡೆಸಬಹುದು ಎಂದರು.
ಮಣಿಕ್ಕರ ಪ್ರೌಢಶಾಲೆಯ ಪ್ರಭಾರ ಮುಖ್ಯಗುರು ಧರ್ಮಪಾಲ ಕೆ.ಕೆ. ಮಾತನಾಡಿ, ಆರೋಗ್ಯ ಪೂರ್ಣ ಜೀವನಕ್ಕೆ ಯೋಗಾಭ್ಯಾಸ ಅಗತ್ಯ. ಯೋಗ ಮಾಡುವುದರಿಂದ ನಮ್ಮಲ್ಲಿ ನಿತ್ಯವು ನವಚೈತನ್ಯ ಮೂಡುತ್ತದೆ. ಯೋಗವೆಂಬುದು ಅಂತಾರಾಷ್ಟ್ರೀಯ ಆರೋಗ್ಯ ಕಲೆ, ಇಂದು ಭಾರತೀಯ ಮೂಲದ ಯೋಗ ವಿಶ್ವಮಾನ್ಯವಾಗಿದೆ. ಯೋಗ ಮಾಡುವುದರಿಂದ ರೋಗದಿಂದ ಮುಕ್ತಿ ಪಡೆಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ ಪ್ರೌಢಶಾಲೆ ಮಣಿಕ್ಕರದ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸೈಯ್ಯದ್ ಗಫೂರ್ ಸಾಹೇಬ್ ಮಾತನಾಡಿ, ಯೋಗಕ್ಕೆ ಯಾವುದೇ ಧರ್ಮದ ಚೌಕಟ್ಟಿಲ್ಲ. ಎಲ್ಲಾ ಧರ್ಮದಲ್ಲೂ ಯೋಗದ ಭಾಗವಿದೆ. ಇಲ್ಲಿನ ಮಿತ್ರ ವೃಂದವು ಸಾಮಾಜಿಕ, ಸಾಂಸ್ಕೃತಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಊರಿನ ಬೆಳವಣಿಗೆಯಲ್ಲಿ ತನ್ನದೇ ಆದ ಪಾತ್ರವಹಿಸುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವುದು, ಸಾಧಕರಿಗೆ ಗೌರವರ್ಪಣೆ ಮೊದಲಾದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಯುವ ಸಂಸ್ಥೆಗಳ ಪಾತ್ರ ಮಹತ್ವದ್ದು ಎಂದರು.
ವೇದಿಕೆಯಲ್ಲಿ ನ್ಯೂ ಬ್ರದರ್ಸ್ ಪಾಲ್ತಾಡು ಇದರ ಗೌರವಾಧ್ಯಕ್ಷ ಸುನೀಲ್ ರೈ ಪಾಲ್ತಾಡು, ಮಿತ್ರವೃಂದದ ಅಧ್ಯಕ್ಷ ರಘುನಾಥ ಉಪಸ್ಥಿತರಿದ್ದರು. ಶಾಲಾ ನಾಯಕ ಮುರಳಿ ಮಾಲಿಕ್, ಬೋಧಕೇತರ ಸಿಬ್ಬಂದಿ ಸನತ್, ಮಿತ್ರ ವೃಂದದ ಮನೀಶ್ ಕುಮಾರ್ ಕೆ., ಲೋಕೇಶ್ ಕೆ.ಬಿ., ಸಂತೋಷ್, ದೀಕ್ಷಿತ್ ರೈ, ಶಿವಪ್ರಸಾದ್, ಶಿಕ್ಷಕಿಯರಾದ ಫೆಲ್ಸಿಟಾ ಈವಾ ಗಲ್ಬಾವೋ, ಉಷಾ ನಾಯಕ್ ಅತಿಥಿಗಳನ್ನು ಗೌರವಿಸಿದರು. ಪ್ರವೀಣ್ ಚನ್ನಾವರ ಸ್ವಾಗತಿಸಿ, ದೇವಿಪ್ರಸಾದ್ ವಂದಿಸಿದರು. ಶಿಕ್ಷಕಿಯರಾದ ಗೀತಾ ಬಿ.ವಿ., ಮೀನಾಕ್ಷೀ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.